ಕೇಕ್ ತರಲು ಬಂದ ವ್ಯಕ್ತಿಗೆ ಚಾಕು ಇರಿತ

crime
Published on

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಓರ್ವನಿಗೆ ಚಾಕುವಿನಿಂದ ಇರಿದ ಘಟನೆ ಶಹರ ಠಾಣೆ ವ್ಯಾಪ್ತಿಯ ಇಲ್ಲಿಯ ಗಣೇಶ ದೇವಸ್ಥಾನ ಬಳಿಯ ಬೇಕರಿ ಬಳಿ ನಡೆದಿದೆ.

ಮಿಲ್ಲತ್ ನಗರದ ಇಬ್ರಾಹಿಂ ಶಿಕರವಾಲೆ ಎಂಬಾತನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ತನ್ನ ಗೆಳೆಯನ ಜನ್ಮದಿನಕ್ಕೆ ಕೇಕ್ ತರಲು ಇಬ್ರಾಹಿಂ ಬಂದಿದ್ದು, ಈ ವೇಳೆ ಬಾಲ್ಯಾ, ಅಭಿಷೇಕ, ಪ್ರಜ್ವಲ್, ದತ್ತಾತ್ರೇಯ, ಚರಣ್ ಎಂಬುವವರ ನಡುವೆ ಗಲಾಟೆಯಾಗಿದೆ. ಆಗ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಕೆಎಂಸಿ ಆರ್‌ಐಗೆ ಶುಕ್ರವಾರ ಭೇಟಿ ನೀಡಿ ಹಲ್ಲೆಗೊಳಗಾದ ಇಬ್ರಾಹಿಂನಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net