ಸಹ ಜೀವನ ನಡೆಸುತ್ತಿದ್ದಾಕೆಯನ್ನು ಒನಕೆಯಲ್ಲಿ ಕೊಂದವನಿಗೆ ಶಿಕ್ಷೆ

881-2.jpg
Published on

ಚಿಕ್ಕಬಳ್ಳಾಪುರ: ಮನೆಯಲ್ಲಿ ತನ್ನೊಂದಿಗೆ ಸಹ ಜೀವನ ನಡೆಸುತ್ತಿದ್ದ ಮಹಿಳೆಯನ್ನು ಒನಕೆಯಿಂದ ಹೊಡೆದು ಕೊಂದಿದ್ದ ವ್ಯಕ್ತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ ದಂಡವನ್ನು ವಿಧಿಸಿದೆ.
ಬಾಗೇಪಲ್ಲಿ ತಾಲೂಕಿನ ನಾರಾಯಣಸ್ವಾಮಿ ಕೋಟೆಯ ನರಸಮ್ಮ ಮೃತಳು.  ಮಾಮಿಡಿಕಾಯಲಪಲ್ಲಿಯ ನಾಗರಾಜಪ್ಪ ಅಪರಾಧಿ. ಚಿಕ್ಕಬಳ್ಳಾಪುರದ 3 ನೇ ಎಡಿಜೆ ನ್ಯಾಯಾಲಯವು ವಿಚಾರಣೆ ನಡೆಸಿ, ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ ದಂಡದ ಜತೆಗೆ ಜೀವಾವಧಿ ಶಿೆ ವಿಧಿಸಿದೆ.

*ಪ್ರಕರಣದ ಹಿನ್ನೆಲೆ
ಕಳೆದ 4 ವರ್ಷಗಳ ಹಿಂದೆ ನರಸಮ್ಮಳ ಪತಿ ಮಾಮಿಡಿಕಾಯಲಪಲ್ಲಿಯ ಚಿನ್ನಗಂಗುಲಪ್ಪ
ಅನಾರೋಗ್ಯದಿಂದ ಮೃತಪಟ್ಟಿದ್ದ. ಬಳಿಕ ಆಕೆ ಮಾಮಿಡಿಕಾಯಲಪಲ್ಲಿಯ ನಾಗರಾಜಪ್ಪರೊಂದಿಗೆ ಸಹ ಜೀವನ ನಡೆಸುತ್ತಿದ್ದಳು. ಇದರ ನಡುವೆ ಕಳೆದ 2024 ನೇ ಏ.19 ರಂದು ಕುಡಿಯಲು ಹಣ ಕೊಡದಿದ್ದ ಕೋಪದಲ್ಲಿ ಅಪರಾಧಿ, ಒನಕೆಯನ್ನು ತೆಗೆದುಕೊಂಡು ಹೊಡೆದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. ಇದರ ಬಗ್ಗೆ ಮೃತಳ ಸಹೋದರ ಕೃಷ್ಣಪ್ಪ ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ಇನ್ಸ್ ಪೆಕ್ಟರ್ ಪ್ರಶಾಂತ್ ಆರ್.ವರ್ಣಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ  ಚಾರ್ಜ್ ಶೀಟ್ ಸಲ್ಲಿಸಿತ್ತು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net