

ಗದಗ: ಕರೊನಾ ನಿಯಂತ್ರಣಿಸುವ ಕಾರಣಕ್ಕೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಅತ್ಯವಶ್ಯಕವಿದ್ದರೆ ಮಾತ್ರವೇ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಅನೇಕರು ಸುಳ್ಳು ಕಾರಣಗಳನ್ನು ಕೊಟ್ಟಿಕೊಂಡು ತಿರುಗಾಡುತ್ತಲೇ ಇದ್ದಾರೆ. ಅದೇ ರೀತಿ ವ್ಯಕ್ತಿಯೊಬ್ಬ ಸುಳ್ಳು ಕಾರಣವನ್ನು ಹೇಳಿ ಪೊಲೀಸರನ್ನೇ ಕಕ್ಕಾಬಿಕ್ಕಿ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗದ ಟಾಂಗಾಕೂಟ ವೃತ್ತದಲ್ಲಿ ವ್ಯಕ್ತಿಯೋರ್ವ ಕೋಳಿಯೊಂದನ್ನು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದ. ಆತನನ್ನು ತಡೆದ ಪೊಲೀಸರು ಏಕಾಗಿ ಹೊರಗೆ ಬಂದಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಆಗ ಆ ವ್ಯಕ್ತಿ, ನನ್ನ ಕೋಳಿಗೆ ನಿನ್ನೆಯಿಂದ ಎರಡು ಬಾರಿ ಭೇದಿ ಆಗಿದೆ. ಅದಕ್ಕಾಗಿ ಅದನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದೇನೆ ಎಂದು ಉತ್ತರಿಸಿದ್ದಾನೆ. ಇದನ್ನು ಕೇಳಿದ ಪೊಲೀಸರು ಕಕ್ಕಾಬಿಕ್ಕಿಯಾಗಿ ನಗಲಾರಂಭಿಸಿದ್ದಾರೆ.
ಕೊನಗೆ ಆ ವ್ಯಕ್ತಿಗೆ ಒಂದಿಷ್ಟ ಬುದ್ಧಿ ಮಾತು ಹೇಳಿ ಯಾವುದೇ ರೀತಿಯ ಶಿಕ್ಷೆ ಅಥವಾ ದಂಡ ವಿಧಿಸದೆ ಕಳುಹಿಸಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)