

ಶಿವಮೊಗ್ಗ: ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಹಿಂತಿರುಗಿದ್ದ ವ್ಯಕ್ತಿಯೊಬ್ಬರು ಬೆಳಗಿನ ಜಾವ ಮನೆಗೆ ನಡೆದು ಹೋಗುತ್ತಿದ್ದಾಗ ಅಪರಿಚಿತನೊಬ್ಬ ಅಡ್ಡಗಟ್ಟಿ ನಗದು, ಉಂಗುರ ಕಸಿದು ಪರಾರಿಯಾಗಿದ್ದಾನೆ.
ನವುಲೆಯ ಸ್ವರ್ಣಮಿತ್ರ ಬಡಾವಣೆಯ ಕುಮಾರ್ ಎಂಬುವರು ದರೋಡೆಗೆ ಒಳಗಾದವರು. ಬಳ್ಳಾರಿಯಲ್ಲಿ ಕೆಲಸ ಮುಗಿಸಿ ಶಿವಮೊಗ್ಗಕ್ಕೆ ಹಿಂತಿರುಗಿದ್ದ ಅವರು ಬೆಳಗಿನ ಜಾವ 4.30ರ ಹೊತ್ತಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಮನೆಗೆ ನಡೆದು ಹೋಗುತ್ತಿದ್ದರು. ಶಿವಬಸವ ನಗರದಲ್ಲಿ ತೆರಳುವಾಗ ಬೈಕ್ ನಿಲ್ಲಿಸಿಕೊಂಡಿದ್ದ ವ್ಯಕ್ತಿಯೊಬ್ಬ ಕುಮಾರ್ ಅವರನ್ನು ಅಡ್ಡಗಟ್ಟಿ ಬೆದರಿಕೆ ಒಡ್ಡಿದಾನೆ.
ಕುಮಾರ್ ಅವರ ಜೇಬಿನಲ್ಲಿದ್ದ 800 ರೂ. ನಗದು, 40 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಚಿನ್ನದ ಉಂಗುರ ಕಸಿದು ಪರಾರಿಯಾಗಿದ್ದಾನೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.