ಪಣಂಬೂರು ಬೀಚ್‌ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

drowning-12
Published on

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಬಳ್ಳಾರಿ ಹೊಸಪೇಟೆಯ ಅಜಿತ್(೪೨) ಎಂಬುವರನ್ನು ಇಲ್ಲಿನ ಜೀವ ರಕ್ಷಕ ಪಡೆ ರಕ್ಷಿಸಿದೆ. ಜೀವ ರಕ್ಷಕ ಪಡೆ ಈ ತನಕ ಒಟ್ಟು ೩೫೦ ಮಂದಿಯನ್ನು ರಕ್ಷಿಸಿದಂತಾಗಿದೆ.

ಅಜಿತ್ ಇತರ ನಾಲ್ವರು ಸ್ನೇಹಿತರೊಂದಿಗೆ ಆಗಮಿಸಿ ಸಮುದ್ರಕ್ಕೆ ಇಳಿದಿದ್ದರು. ಉಳಿದವರು ಮೇಲಕ್ಕೆ ಬಂದರೂ, ಅಲೆಯ ಸೆಳೆತಕ್ಕೆ ಸಿಲುಕಿದ ಅಜಿತ್ ನೀರಿನಲ್ಲಿ ಮುಳುಗಿದ್ದರು. ಈ ಸಂದರ್ಭ ಜೀವ ರಕ್ಷಕ ಪಡೆಯ ಸದಸ್ಯರು ತಕ್ಷಣ ಕಾರ್ಯಾಚರಣೆ ನಡೆಸಿ ಅಜಿತ್ ಅವರನ್ನು ನೀರಿನಿಂದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net