ಮನೆ ಮನೆಗೆ ಪೊಲೀಸ್​ ಅಭಿಯಾನಕ್ಕೆ ಚಾಲನೆ

udp-11-police
Published on

ಉಡುಪಿ: ಸೈಬರ್​ ಅಪರಾಧ ಮಾದಕ ವಸ್ತು ಡ್ರಗ್ಸ್​ , ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂಧ ಜಾರಿಗೆ ತರಲಾದ "ಮನೆ ಮನೆಗೆ ಪೊಲೀಸ್​' ವಿನೂತನ ಅಭಿಯಾನಕ್ಕೆ ಶುಕ್ರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್​ ಎಸ್​. ಗಂಗಣ್ಣನವರ್​ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​, ಹೆಚ್ಚುವರಿ ಪೊಲೀಸ್​ ಅಧೀಕ್ಷಕರಾದ ಸುಧಾಕರ ಎಸ್​. ನಾಯ್ಕ ಹಾಗೂ ಪರಮೇಶ್ವರ ಹೆಗಡೆ, ಪೊಲೀಸ್​ ಉಪಾಧೀಕ್ಷಕ ಪ್ರಭು ಡಿ.ಟಿ., ಪಿಎಎಸ್​ಐ ಭರತೇಶ್​, ನಾರಾಯಣ, ಪ್ರಕಾಶ್​ ಸಾಲಿಯಾನ್​, ಹುಸೇನ್​ ಸಾಬ್​ ಮೊದಲಾದವರು ಹಾಜರಿದ್ದರು.

ಅಭಿಯಾನ ಅಂಗವಾಗಿ ಪಿಎಎಸ್​ಐ ಅಥವಾ ಎಎಸ್​ಐ ತಂಡದ ನೇತೃತ್ವವನ್ನು ವಹಿಸಿಕೊಂಡು ಪ್ರತಿ ಮನೆಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿರುತ್ತೇವೆ. ಮನೆಯಲ್ಲಿರುವವರ ಹೆಸರು, ಮೊಬೈಲ್​ ನಂಬ್ರ ಪಡೆದುಕೊಳ್ಳಲಾಗುವುದು. ಸಾರ್ವಜನಿಕರರಿಂದ ದೂರು,- ದುಮ್ಮಾನಗಳನ್ನು ಮತ್ತು ಕೋರಿಕೆಗಳನ್ನು ಸ್ವೀಕರಿಸಲಾಗುವುದು. ಹರಿರಾಮ್​ ಶಂಕರ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net