

ವಿಜಯಪುರ: ಹೊಲಕ್ಕೆ ಹೋಗಿದ್ದ ಯುವಕನೊಬ್ಬ ಬರ್ಬರವಾಗಿ ಕೊಲೆಗೀಡಾಗಿದ್ದು, ದುಷ್ಕರ್ಮಿಗಳು ಆತನನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದಲ್ಲಿ ಈ ಕೊಲೆ ನಡೆದಿದೆ.
ಸಿದ್ಧಾರೂಢ ಮರಾಠಿ (22) ಎಂಬಾತ ಕೊಲೆಯಾದ ಯುವಕ. ಈತ ಹೊಲಕ್ಕೆ ಹೋಗಿಬರುವುದಾಗಿ ಹೇಳಿಹೋಗಿದ್ದ. ಆದರೆ ಅಲ್ಲಿಯೇ ಈತ ಕೊಲೆಗೀಡಾಗಿದ್ದ. ಮೈತುಂಬಾ ಕೊಡಲಿ ಏಟುಗಳು ಬಿದ್ದಿದ್ದು, ಬರ್ಬರವಾಗಿ ಕೊಲೆ ಮಾಡಲಾಗಿದೆ. ಆದರೆ ಕೊಲೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. ಸ್ಥಳಕ್ಕೆ ಎಎಸ್ಪಿ ರಾಮ ಅರಸಿದ್ಧಿ, ಡಿವೈಎಸ್ಪಿ ಶ್ರೀಧರ ದೊಡ್ಡಿ ಭೇಟಿ ಪರಿಶೀಲಿಸಿದ್ದಾರೆ. ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.