ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ತಂದೆಯನ್ನೇ ಕೊಂದ ಮಗ!

Murder
Published on

ಚಿಕ್ಕನಾಯಕನಹಳ್ಳಿ (ತುಮಕೂರು): 30 ವರ್ಷವಾದರೂ ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಮಗನೇ ತಂದೆಯನ್ನು ಶುಕ್ರವಾರ ರಾತ್ರಿ ಕೊಲೆ ಮಾಡಿದ್ದಾನೆ. ಪಟ್ಟಣದ ಮಾರುತಿ ನಗರದ ನಿವಾಸಿ ಸಣ್ಣಯ್ಯ (65) ಮೃತ. ಇವರ ಪುತ್ರ ವೆಂಕಟೇಶನನ್ನು ಪೊಲೀಸರು ಬಂಧಿಸಿದ್ದಾರೆ.

ಸಣ್ಣಯ್ಯ ಅವರಿಗೆ ಮೂವರು ಮಕ್ಕಳಿದ್ದು, ವೆಂಕಟೇಶ ಎರಡನೇ ಮಗ. ಮೊದಲನೇ ಹಾಗೂ ಕೊನೆಯ ಮಗನಿಗೆ ಮದುವೆ ಮಾಡಿದ್ದು, ತನಗೆ ಇನ್ನೂ ಮದುವೆ ಮಾಡಿಲ್ಲ ಎಂದು ಕೋಪಗೊಂಡು 6 ತಿಂಗಳ ಹಿಂದೆಯೇ ತಂದೆಯ ಕಾಲು ಮುರಿದಿದ್ದ.

ಬೆಂಗಳೂರಿನಲ್ಲಿ ಲಾರಿ ಚಾಲಕನಾಗಿದ್ದ ಆರೋಪಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಕೆಲಸವಿಲ್ಲದೆ ಹಣ ನೀಡುವಂತೆಯೂ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net