ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವು

20 KKP 3
Published on

ಕನಕಪುರ: ಉಸಾತನೂರು ಬಳಿಯ ಶ್ವೇತಾ ಬಾರ್ ಬಳಿ ಶನಿವಾರ ರಾತ್ರಿ ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಾತನೂರಿನ ಟೇಲರ್ ಜಗದೀಶ್ (39) ಮೃತ. ಕಾರಿನಲ್ಲಿದ್ದ 6 ಮಂದಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಬ್ಬಾಳು ಕಡೆಯಿಂದ ವೇಗವಾಗಿ ಬಂದ ಕಾರು ಗುದ್ದಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಕಾರಿನಿಂದ ಇಳಿದು ಪರಾರಿಯಾಗುತ್ತಿದ್ದ ಶಿವಾಲದಪ್ಪನ ಬೆಟ್ಟದ ಹರ್ಷ, ಜೆಸಿಬಿ ಜಯರಾಂ, ಸಾಸಲಾಪುರದ ಶಿವರಾಜು, ಸಚಿನ್, ಸುನೀಲ್ ಹಾಗೂ ಕೊನ್ನಾಪುರದ ಸಂಜಯ್ ಎಂಬುವವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.ಅಪಘಾತಕ್ಕೆ ಅತಿ ವೇಗದ ಚಾಲನೆ ಕಾರಣ ಎನ್ನಲಾಗಿದೆ.

ಸಾತನೂರು ಠಾಣೆ ಸಬ್ ಇನ್​ಸ್ಪೆಕ್ಟರ್ ರವಿಕುಮಾರ್ ಕೇಸು ದಾಖಲಿಸಿ ವಾಹನ ವಶಪಡಿಸಿಕೊಂಡಿದ್ದಾರೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಉರುಳಿಬಿದ್ದಿದ್ದು, ಇದರಿಂದಾಗಿ ಇಡೀ ರಾತ್ರಿ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net