ಹೊನ್ನಾವರದಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮ

MAN KI BATH HNR
Published on

ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮ ಪಟ್ಟಣದ ಎಸ್​ಡಿಎಂ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಸ್ಥಳಿಯ ಜಾನಪದ ಕಲಾವಿದೆ ಕುಟ್ಣಿ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.

ಮನ್ ಕಿ ಬಾತ್ ರಾಜ್ಯ ಸಂಯೋಜಕ ಪ್ರಸನ್ನ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಮಂತ್ರಿಯಾದ ನಂತರ ಮೊದಲ ಮನ್ ಕಿ ಬಾತ್ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಅವಕಾಶ ಕೊಟ್ಟಿದ್ದು, ಅದನ್ನು ಹೊನ್ನಾವರದಲ್ಲಿ ನಡೆಸಲಾಗಿದೆ. ಪ್ರತಿಯೊಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಯೂ ಒಂದಲ್ಲ ಒಂದು ವಿಚಾರಗಳ ಕುರಿತು ಮಾತನಾಡುತ್ತಾರೆ. ಆ ವಿಚಾರಗಳು ದೇಶದ ಜನರನ್ನು ತಲುಪುವ ಸ್ಪೂರ್ತಿದಾಯಕ ಕಾರ್ಯಕ್ರಮವಾಗಿದೆ ಎಂದರು.

ಟಿವಿ ಸ್ಕ್ರೀನ್ ಮೇಲೆ ಮೋದಿ ಅವರ ಮನದಾಳದ ಮಾತುಗಳ ಪ್ರದರ್ಶನ ಮಾಡಲಾಯಿತು. ಮನ್ ಕಿ ಬಾತ್ ಕುರಿತು ದಿನೇಶ ಕಾಮತ, ಪ್ರಾಂಶುಪಾಲೆ ರೇಣುಕಾ ಗೋಳಿಕಟ್ಟೆ, ನಿವೃತ್ತ ಪ್ರಾಚಾರ್ಯ ಪಿ.ಎಂ. ಹೊನ್ನಾವರ, ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಡಾ. ಜಿ.ಪಿ. ಪಾಠಣಕರ, ಶಾಂತಾರಾಮ ನಾಯ್ಕ, ಡಾ. ಡಿ.ಎಲ್. ಹೆಬ್ಬಾರ ಅಭಿಪ್ರಾಯ ಹಂಚಿಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಶಾಸಕ ದಿನಕರ ಶೆಟ್ಟಿ, ಬಿಜೆಪಿ ಹೊನ್ನಾವರ ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ, ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಚಿಟ್ಟಾಣಿ, ಕೆರೆಮನೆ ಶಿವಾನಂದ ಹೆಗಡೆ, ಗೋವಿಂದ ನಾಯ್ಕ, ಈಶ್ವರ ನಾಯ್ಕ ಭಟ್ಕಳ, ಗಣಪತಿ ನಾಯ್ಕ ಬಿಟಿ, ಗಣಪತಿ ಗೌಡ ಚಿತ್ತಾರ, ಯೋಗೇಶ ಮೇಸ್ತ, ಹರಿಶ್ಚಂದ್ರ ನಾಯ್ಕ, ಎಂ.ಎಸ್.ಹೆಗಡೆ, ಇತರರಿದ್ದರು. ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net