

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯ ತನ್ನ ಬದುಕಿನ ಜತೆಗೆ ಇತರ ಜೀವರಾಶಿಗಳನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ಹೊಂದಿರಬೇಕು. ಸೃಷ್ಟಿಯಲ್ಲಿ ಇದ್ದ ಎಷ್ಟೋ ಜೀವರಾಶಿಗಳು ನಶಿಸಿ ಹೋಗಿವೆ. ಇನ್ನೂ ಕೆಲವು ವಿನಾಶದ ಅಂಚಿನಲ್ಲಿವೆ. ಇದಕ್ಕೆಲ್ಲ ಕಾರಣ ಮನುಷ್ಯನೇ ಎಂದು ಸಾಹಿತಿ ಡಾ. ವೀರಣ್ಣ ರಾಜೂರು ಹೇಳಿದರು.
ನಗರದ ಹು&ಧಾ ನಾಗರಿಕ ಪರಿಸರ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ "ಪರಿಸರ ಮಿತ್ರ ಶಾಲಾ ಸ್ಪರ್ಧಾ ಯೋಜನೆಯ ಪ್ರಶಸ್ತಿ ಪ್ರದಾನ' ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಪರಿಸರ ನಿಯಂತ್ರಣ ಮಂಡಳಿ ವಿಭಾಗ ಅಧಿಕಾರಿ ಗೋಪಾಲಕೃಷ್ಣ ಮಾತನಾಡಿ, ಹಸಿರು ಶಾಲೆ ಪರಿಕಲ್ಪನೆ ಎಲ್ಲೆಡೆ ಬರಬೇಕಿದೆ. ಪರಿಸರ ನಾಶವಾಗದಂತೆ ನಮ್ಮ ಜೀವನ ಶೈಲಿ ಇರಬೇಕು ಎಂದರು.
ಜಗದೀಶ ಐ.ಎಚ್. ಮಾತನಾಡಿದರು. ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಅಧ್ಯಕ್ಷತೆ ವಹಿಸಿದ್ದರು. ಶಿಣಾಧಿಕಾರಿ ಎಸ್.ಎಂ. ಹುಡೇದಮನಿ, ೇತ್ರ ಶಿಣಾಧಿಕಾರಿ ಉಮಾ ಬಸಾಪುರ, ಎಂ.ಎಂ. ಚಿಕ್ಕಮಠ, ಗೀತಾ ಕುಂಬಿ, ಜಯಶ್ರೀ ಪಾಟೀಲ, ಪ್ರಮೀಳಾ ಜಕ್ಕಣ್ಣವರ, ಪ್ರಭಣ್ಣ ಅಂಚಟಗೇರಿ, ಮಹಾಂತೇಶ ನರೇಗಲ್ಲ ಇತರರು ಇದ್ದರು.
ಪರಿಸರ ಸಮಿತಿ ಸಹ ಕಾರ್ಯದಶಿರ್ ಕೆ. ಎಚ್. ನಾಯಕ ಸ್ವಾಗತಿಸಿದರು. ಡಾ. ವಿಲಾಸ ಕುಲಕಣಿರ್ ವಂದಿಸಿದರು. ಜಯಲಕ್ಷಿ$್ಮ ಎಚ್. ನಿರೂಪಿಸಿದರು.
ಬಹುಮಾನ ಪಡೆದ ಶಾಲೆಗಳು: ಪರಿಸರ ಮಿತ್ರ ಪ್ರಶಸ್ತಿಯ ಪ್ರಥಮ ಬಹುಮಾನ (10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ) ಕಲಟಗಿ ದ್ಯಾವನಕೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದ್ವೀತಿಯ ಬಹುಮಾನ (5 ಸಾವಿರ ರೂ.) ಕುಂದಗೋಳ ಚಿಲಕವಾದ ಎಚ್.ಕೆ. ಆ್ಯಂಡ್ ಜಿ.ಕೆ. ಕೋನರೆಡ್ಡಿ ಸರ್ಕಾರಿ ಪ್ರೌಢಶಾಲೆ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೃತೀಯ ಬಹುಮಾನ (3 ಸಾವಿರ ರೂ.) ನೂಲ್ವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಾಪುರದ ಸರ್ಕಾರಿ ಪ್ರೌಢಶಾಲೆ ಹಾಗೂ ಧಾರವಾಡ ಸುತಗಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳು ಪಡೆದರೆ, ಸಮಾಧಾನಕರ ಬಹುಮಾನ (2 ಸಾವಿರ ರೂ.)ಗಳನ್ನು ಕುಂದಗೋಳ ತಾಲೂಕಿನ ಬಿ.ವೈ. ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಮಡೊಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಳ್ನಾವರದ ಕಸ್ತೂರ ಬಾ ಬಾಲಿಕಾ ವಸತಿ ವಿದ್ಯಾಲಯ, ಹುಬ್ಬಳ್ಳೀ ಗೋಕುಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಧಾರವಾಡ ವನಿತಾ ಪ್ರಾಯೋಗಿಕ ಶಾಲೆಗಳು ಪಡೆದಿವೆ.