

ಹುಬ್ಬಳ್ಳಿ : ನಿತ್ಯ ಯೋಗ ಮಾಡುವುದರಿಂದ ಮನುಷ್ಯ ನಿರೋಗಿಯಾಗುತ್ತಾನೆ. ಏಕಾಗ್ರತೆ, ತಾಳ್ಮೆಯ ಗುಣ ಬರುತ್ತದೆ ಎಂದು ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ ಹೇಳಿದರು.
ಇಲ್ಲಿನ ಶ್ರೀ ಮಹಾವೀರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ರಕ್ತದೊತ್ತಡ, ಮಧುಮೇಹ ನಿಯಂತ್ರಣಕ್ಕೂ ಯೋಗ ಉತ್ತಮ ಮದ್ದು ಎಂದರು.
ರಾಷ್ಟ್ರಮಟ್ಟದ ಯೋಗಪಟು ಸೌಮ್ಯ ಚುಳಕಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯೋಧ್ಯಾಪಕಿ ಶೋಭಾ ಯಾವಗಲ್ಲ, ಭಾಗ್ಯವತಿ ಬತೂಲ್ಲಾ, ಅರ್ಚನಾ ಕಲಾಲ, ರಾಜೇಶ್ವರಿ ವೆರ್ಣೆಕರ, ಪಾರ್ವತಿ ಶೀಲವಂತರ, ಚಂದ್ರಿ್ರಾ ಉಪಾಧ್ಯಾಯ, ಪೂಜಾ ದೇವಳೆ, ದೀಪಾ ಪತ್ರಾವಳಿ, ಸುಮಾ ನೇಗಿನಾಳ, ಮೇಹರ ಶೇಖ್ ಹಾಗೂ ಇತರರು ಇದ್ದರು.