

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಪೊಲೀಸ್ ಪೇದೆ ಬಿಟ್ಟು ನಾಪತ್ತೆಯಾಗಿದ್ದು ಇದರಿಂದ ಸಂತ್ರಸ್ಥೆ ನ್ಯಾಯಕ್ಕಾಗಿ ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ.
ಶಿಡ್ಲಘಟ್ಟ ಪೊಲೀಸ್ ಠಾಣೆಯ ಪೇದೆ ತಿಮ್ಮಣ್ಣ ಬೂಸರೆಡ್ಡಿ ಈ ಹಿಂದೆ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿಯ ಸಿರೀಶ್ ಎಂಬುವರನ್ನು ಪ್ರೀತಿಸಿ, ಕೊನೆಗೆ ಕೈ ಕೊಟ್ಟಿದ್ದ. ಇದರಿಂದ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗ ಕಾನೂನು ಕ್ರಮದ ಭಯದಲ್ಲಿ ಸಹೋದ್ಯೋಗಿಗಳ ಸಮ್ಮುಖದಲ್ಲಿ ಬೇಸರದಿಂದಲೇ ಮದುವೆಯಾಗಿದ್ದ. ಇದೀಗ ಒಂದು ವರ್ಷ ಕಳೆಯುವಷ್ಟರಲ್ಲಿ ಮತ್ತೆ ಹೆಂಡತಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಕೆಲಸಕ್ಕೂ ಹಾಜರಾಗುತ್ತಿಲ್ಲ. ಕದ್ದು ಮುಚ್ಚಿ ಓಡಾಡುತ್ತಿದ್ದಾನೆ ಎನ್ನಲಾಗಿದೆ. ಇದರಿಂದ ಮಹಿಳೆಯು ಹಿರಿಯ ಅಧಿಕಾರಿಗಳಿಗೆ ಮಾತ್ರವಲ್ಲದೇ ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ.