VIDEO| ಆನೆ ದಾಳಿಯಿಂದ ತಪ್ಪಿಸಿಕೊಂಡ ದ್ವಿಚಕ್ರ ವಾಹನ ಸವಾರ: ಸ್ಥಳದಿಂದ ಕದಲದ ಗಜರಾಜ!

Elephant
Published on

ಗುಂಡ್ಲುಪೇಟೆ: ಬಂಡೀಪುರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ಆನೆ ದಾಳಿಯಿಂದ ಬೈಕ್ ಸವಾರ‌ ತಪ್ಪಿಸಿಕೊಂಡಿದ್ದಾ‌‌ನೆ.

ಆನೆ ಹತ್ತಿರಕ್ಕೆ ಬರುತ್ತಿದ್ದಂತೆ ಸವಾರ ವಾಹನವನ್ನು ಬಿಟ್ಟು ಓಡಿದ್ದ. ಸ್ವಲ್ಪ ಹೊತ್ತಿನವರೆಗೂ ಗಜರಾಜ ವಾಹನವನ್ನು ಬಿಟ್ಟು ಕದಲದೇ, ಸ್ಥಳದಲ್ಲಿ ನಿಂತಿದ್ದ. ರಸ್ತೆಯಲ್ಲಿ ಇತರೆ ವಾಹನಗಳು ಚಲಿಸುತ್ತಿದ್ದರೂ ತನ್ನ ಸ್ಥಳದಿಂದ ಮಾತ್ರ ಕಾಲ್ಕೀಳಲಿಲ್ಲ. ಕೊನೆಗೆ ಬೇಸರವಾಯಿತೇನೋ ಸ್ಥಳದಿಂದ ಸ್ವಲ್ಪ ಸರಿದು ದೂರದಲ್ಲಿ ನಿಂತಿದ್ದ.

ಬಳಿಕ ವಾಹನ ಸವಾರ ಬೇರೆ ವಾಹನದಲ್ಲಿದ್ದವರ ನೆರವು ಪಡೆದು ತನ್ನ ವಾಹನವನ್ನು ತೆಗೆದುಕೊಂಡು‌ ಹೋಗುವಂತಾಯಿತು. ಈ ವೇಳೆ ರಸ್ತೆ ಬದಿಯಲ್ಲೇ ಆನೆ ನಿಂತಿತ್ತು. ಏನೂ ಮಾಡದೇ ಸುಮ್ಮನೇ ನೋಡುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಹ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net