ಸ್ಯಾನಿಟೈಸರ್ ಸ್ಟ್ಯಾಂಡ್ ಮಾರುತ್ತಿದ್ದ ಅಂಗಡಿಯವನಿಗೆ ‘ಗ್ರಾಹಕ’ನಿಂದಲೇ ಶಾಕ್!

cyber crime
Published on

ಬೆಂಗಳೂರು: ಸ್ಯಾನಿಟೈಸರ್ ಸ್ಟಾೃಂಡ್ ಬೇಕೆಂದು ಅಂಗಡಿ ಮಾಲೀಕನಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಲಕ್ಷಾಂತರ ರೂ. ವಂಚನೆ ಮಾಡಿದ ಪ್ರಕರಣ ನಡೆದಿದೆ.

ನಾಗದೇವನಹಳ್ಳಿಯ ವ್ಯಾಪಾರಿ ನಾಗರಾಜ್ ಸಿಂಧಗಿ ಎಂಬುವವರ ಮೊಬೈಲ್ ಫೋನ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ‘35 ಸ್ಯಾನಿಟೈಸರ್ ಸ್ಟಾಂಡ್ ಬೇಕಿವೆೆ. ಮೊದಲು ಹಣ ಪಾವತಿಸುತ್ತೇನೆ. ಆನಂತರ ನನ್ನ ವಿಳಾಸಕ್ಕೆ ಪಾರ್ಸೆಲ್ ಕಳುಹಿಸಿ’ ಎಂದು ಹೇಳಿದ್ದಾನೆ. ಇದನ್ನು ನಂಬಿದ ನಾಗರಾಜ್, ಆ ಅಪರಿಚಿತ ವ್ಯಕ್ತಿ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಸ್ಕ್ಯಾನ್ ಮಾಡುತ್ತಿದಂತೆ ನಾಗರಾಜ್ ಬ್ಯಾಂಕ್ ಖಾತೆಯಿಂದ 1.18 ಲಕ್ಷ ರೂ. ಕಡಿತವಾಗಿದೆ. ನಂತರ ಆ ನಂಬರ್‌ಗೆ ಕರೆ ಮಾಡಿದರೆ ಆ ವ್ಯಕ್ತಿ ಕರೆ ಸ್ವೀಕರಿಸಿಲ್ಲ. ಮೋಸ ಹೋಗಿದ್ದನ್ನು ಅರಿತ ನಾಗರಾಜು ಈ ಪೊಲೀಸರ ಮೊರೆ ಹೋಗಿದ್ದಾರೆ. ಆರೋಪಿಯನ್ನು ಜಾರ ಸಿಂಗ್ ಎಂದು ಗುರುತಿಸಲಾಗಿದ್ದು ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇದೇ ಮಾದರಿಯಲ್ಲಿ ಮೈಸೂರು ರಸ್ತೆ ಬ್ಯಾಟರಾಯನಪುರದ ಜೆ. ರಾಮನ್ ಎಂಬುವರಿಗೆ 88 ಸಾವಿರ ರೂ. ವಂಚನೆ ಮಾಡಲಾಗಿದೆ. ಇವರು ನೀಡಿದ ದೂರಿನ ಮೇರೆಗೆ ಮಂಜಿತ್ ಸಿಂಗ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಒಬ್ಬನೇ ವ್ಯಕ್ತಿಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net