ಡಿಸ್ಕೌಂಟ್ ಬೇಕೆ ಡಿಸ್ಕೌಂಟ್? ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್!

Cyber
Published on

ಬೆಂಗಳೂರು: ಶೇಕಡ 50ರಷ್ಟು ರಿಯಾಯಿತಿ ದರದಲ್ಲಿ ಸೊಂಟದ ಬೆಲ್ಟ್‌ಗಳನ್ನು ಕೊಡುವುದಾಗಿ ವ್ಯಕ್ತಿಗೆ ಕರೆ ಮಾಡಿದ ಸೈಬರ್ ಕಳ್ಳನೊಬ್ಬ 25 ಸಾವಿರ ರೂ. ಪಡೆದು ವಂಚಿಸಿರುವ ಘಟನೆ ನಡೆದಿದೆ.

ಸಂಪಂಗಿರಾಮನಗರದ 40 ವರ್ಷದ ವ್ಯಕ್ತಿ ವಂಚನೆಗೆ ಒಳಗಾದವರು. ಇವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತನೊಬ್ಬ, ಶೇಕಡ 50ರಷ್ಟು ಡಿಸ್ಕೌಂಟ್‌ನಲ್ಲಿ ಬೆಲ್ಟ್ ಮಾರಾಟ ಮಾಡುತ್ತಿದ್ದೇವೆ. ಬೇಕಾದರೆ ನಾನು ಕಳುಹಿಸುವ ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಮತ್ತು ಮನೆ ವಿಳಾಸ ನಮೂದಿಸಿ. ನಂತರ ಬ್ಯಾಂಕ್ ಖಾತೆಗೆ 25 ಸಾವಿರ ರೂ. ವರ್ಗಾವಣೆ ಮಾಡಿ ಎಂದು ಸೂಚಿಸಿದ್ದಾನೆ. ಇದನ್ನು ನಂಬಿದ ವ್ಯಕ್ತಿ, ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದು, ಆತ ಕಳಪೆ ಬೆಲ್ಟ್ ಕಳುಹಿಸಿ ವಂಚಿಸಿದ್ದಾನೆ. ನಂತರ ಇವರಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ವಂಚನೆಗೆ ಒಳಗಾದ ವ್ಯಕ್ತಿ ಈಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net