

ಮಂಡ್ಯ: ಮಂಡ್ಯ-ಯಲಿಯೂರು ಮಾರ್ಗ ಮಧ್ಯೆ ಶನಿವಾರ ರೈಲಿಗೆ ಸಿಲುಕಿ ಅಪರಿಚಿತ ವೃದ್ಧ ಮೃತಪಟ್ಟಿದ್ದಾನೆ.
ಸುಮಾರು 60 ವರ್ಷದವನಾಗಿದ್ದು, 5.6 ಅಡಿ ಎತ್ತರ ಹಾಗೂ ಗೋಧಿ ಮೈಬಣ್ಣವಿದೆ. ಮೃತನ ಮೈ ಮೇಲೆ ನೀಲಿ ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.