ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು

crime
Published on

ಹುಬ್ಬಳ್ಳಿ: ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ನೀರು ಹೊಡೆಯಲು ಹೋದ ವ್ಯಕ್ತಿಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ನವನಗರ ಸಹ್ಯಾದ್ರಿ ಕಾಲನಿಯಲ್ಲಿ ಭಾನುವಾರ ನಡೆದಿದೆ.

ವೆಂಕಟೇಶ ಜಿ. (41) ಮೃತರು. ಮೋಹನ ಎಸ್., ಗಣೇಶ ಎಸ್. ಎಂಬುವರು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ನನ್ನ ಪತಿ ಮೃತ ಪಟ್ಟಿದ್ದಾನೆ ಎಂದು ವೆಂಕಟೇಶ ಪತ್ನಿ ಹನಮವ್ವ ದೂರು ನೀಡಿದ್ದಾರೆ. ವೆಂಕಟೇಶ ಅವರು ಗಣೇಶ ಎಂಬುವರ ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಕಟ್ಟದಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಕಟ್ಟಡಕ್ಕೆ ನೀರು ಹೊಡೆಯಲು ಹೋದಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನವನಗರ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net