ಲಿಫ್ಟ್ ಕುಸಿದು ವ್ಯಕ್ತಿ ಸಾವು

crime
Published on

ಹುಬ್ಬಳ್ಳಿ: ನಗರದ ನಿಲಿಜಿನ್ ರಸ್ತೆ ಕಾಟನ್ ಮಾರ್ಕೆಟ್‌ನ ಶ್ರೀನಾಥ ಕಾಂಪ್ಲೆಕ್ಸ್‌ನಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಒಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ದೇವರಗುಡಿಹಾಳ ರಸ್ತೆಯ ಮಂಜುನಾಥ ಕುರವತ್ತಿಮಠ (32) ಮೃತರು. ಮಂಗಲ ಓಣಿಯ ಸುರೇಶ ಕುಂದ್ರಳ್ಳಿ ಗಾಯಗೊಂಡಿದ್ದಾರೆ. ಇವರು ರಾಘವೇಂದ್ರ ಫಾರ್ಮಾದಲ್ಲಿ ಕೆಲಸ ಮಾಡುತ್ತಿದ್ದು, ಪಾರ್ಸಲ್ ತೆಗೆದುಕೊಳ್ಳಲೆಂದು ಕಾಂಪ್ಲೆಕ್ಸ್‌ಗೆ ಬಂದು ಲಿಫ್ಟ್‌ನಲ್ಲಿ ಹತ್ತಿದಾಗ ಚೈನ್ ಕತ್ತರಿಸಿ ಅವಘಡ ಸಂಭವಿಸಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net