ಮದ್ಯ ಸೇವಿಸಿ ರಸ್ತೆ ಪಕ್ಕ ಮಲಗಿದ್ದವ ಸಾವು

VV DIGITAL
Published on

ನರಗುಂದ: ವಿಪರೀತ ಮದ್ಯ ಸೇವಿಸಿ ರಸ್ತೆ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಬಸ್​ನಿಲ್ದಾಣ ಬಳಿಯ ಭದ್ರಗೌಡ್ರ ಸಂದಿಯಲ್ಲಿ ಶುಕ್ರವಾರ ನಡೆದಿದೆ.

ರೋಣ ತಾಲೂಕು ಯಾವಗಲ್ಲ ಗ್ರಾಮದ ಬಸಪ್ಪ ಗುರುಶಾಂತಪ್ಪ ಹದ್ಲಿ (45) ಮೃತಪಟ್ಟ ದುರ್ದೈವಿ.

ಈತ ಯಾವಗಲ್ಲನಿಂದ ಶುಕ್ರವಾರ ಬೆಳಗ್ಗೆ ನರಗುಂದಕ್ಕೆ ಆಗಮಿಸಿ ವಿಪರೀತ ಮದ್ಯಸೇವಿಸಿ ಸುರಿಯುತ್ತಿರುವ ಮಳೆಯಲ್ಲಿಯೇ ರಸ್ತೆ ಪಕ್ಕದಲ್ಲಿ ಮಲಗಿದ್ದಾಗ ಅವಘಢ ಸಂಭವಿಸಿದೆ.

ಈ ಕುರಿತು ಮೃತನ ಪತ್ನಿ ಬಸವ್ವ ಹದ್ಲಿ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪಿಎಸ್​ಐ ಎಫ್.ಎಸ್. ಮಣ್ಣೂರ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net