

ಮಂಡ್ಯ: ಮಂಡ್ಯ-ಹನಕೆರೆ ಮಾರ್ಗ ಮಾಧ್ಯೆ ಗುರುವಾರ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.
ಸುಮಾರು 40 ರಿಂದ 45 ವರ್ಷದವನಾಗಿದ್ದು, ಐದು ಅಡಿ ಎತ್ತರ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಮೃತನ ಮೈಮೇಲೆ ಬಿಳಿ, ಕಾಫಿ, ನೀಲಿ ಬಣ್ಣದ ಸಣ್ಣ ಚುಕ್ಕೆಗಳುಳ್ಳ ತುಂಬು ತೋಳಿನ ಅಂಗಿ, ನೇವಿ ನೀಲಿ ಬಣ್ಣದ ಪ್ಯಾಂಟ್ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.