ಹಾವು ಕಡಿದು ವ್ಯಕ್ತಿ ಸಾವು

snake bite
Published on

ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಹಾವು ಕಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಗರದ ಚನ್ನಪೇಟೆಯಲ್ಲಿ ಸೋಮವಾರ ನಡೆದಿದೆ.

ಪಡಿಯಪ್ಪ ನಂದುಡಗಿ(42) ಮೃತ ದುರ್ದೈವಿ. ಮೂತ್ರ ವಿಸರ್ಜನೆಗೆ ಹೋದಾಗ ನಾಲದಲ್ಲಿದ್ದ ಕೊಳಕ ಮಂಡಲ ಹಾವು ಇತ್ತೀಚೆಗೆ ಕಚ್ಚಿದ್ದು ತಕ್ಷಣ ಅವರನ್ನು ಕೆಎಂಸಿಆರ್‌ಐಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಜತೆಗೆ ಹಾವನ್ನೂ ಕೂಡ ಕುಟುಂಬದವರು ತೆಗೆದುಕೊಂಡು ಹೋಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಸಬಾಪೇಟೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net