

ಹೊನ್ನಾವರ: ತಾಲೂಕಿನ ಮುಗ್ವಾ ಬಂಕನಹಿತ್ಲದಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿಯ ಶವ ಪ್ರವಾಹದ ನೀರಿನಲ್ಲಿ ಪತ್ತೆಯಾಗಿದೆ.
ಮುಗ್ವಾ ಬಂಕನಹಿತ್ಲದ ಪ್ರಾನ್ಸಿಸ್ ಜೂಜೆ ಲೋಪಿಸ್ ಮ್ರತಪಟ್ಟ ವ್ಯಕ್ತಿ.
ಇವರು ಮನೆಯಲ್ಲಿ ಒಬ್ಬರೇ ಇದ್ದು ಕುಟುಂಬದವರು ಬೇರೆ ರಾಜ್ಯದಲ್ಲಿ ಇದ್ದಾರೆ.
ಹೀಗಾಗಿ ವ್ಯಕ್ತಿ ನಾಪತ್ತೆಯಾಗಿದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.
ನಾಲ್ಕು ದಿನಗಳಿಂದ ಕಾಣಿಸಿಕೊಳ್ಳದೇ ಇರುವುದರಿಂದ ಆತಂಕಗೊಂಡ ಅವರ ಸಂಬಂಧಿಕರು ಹುಡುಕಾಟ ನಡೆಸಿದಾಗ ಬುಧವಾರ ಪ್ರವಾಹದ ನೀರಿನಲ್ಲಿ ಶವ ಪತ್ತೆಯಾಗಿದೆ.
ಇದನ್ನೂ ಓದಿ:‘ಕಿರಾತಕ’ ಸಿನಿಮಾ ಸ್ಟೈಲ್ನಲ್ಲಿ ಪ್ರೀತ್ಸೇ ಪ್ರೀತ್ಸೇ ಎಂದು ಅಪ್ರಾಪ್ತಳ ದುಂಬಾಲು ಬಿದ್ದವನ ಬಂಧನ!
ಕೂಲಿ ಕೆಲಸಕ್ಕೆ ಎಂದು ಮನೆಯಿಂದ ಹೋಗಿದ್ದ ಪ್ರಾನ್ಸಿಸ್ ನೆರೆಹಾವಳಿ ಬಂದ ಸಮಯದಲ್ಲಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ಮ್ರತನ ಸಹೋದರ ಮತ್ತೇಸ್ ಜೂಜೆ ಲೋಪಿಸ್ ದೂರಿನಲ್ಲಿ ತಿಳಿಸಿದ್ದಾರೆ.
ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.