ವಿದ್ಯುತ್ ಆಘಾತದಿಂದ ಸಾವು

Current Shock
Published on

ಈಶ್ವರಮಂಗಲ: ನರಿಮೊಗ್ರು ಗ್ರಾಮದ ಒತ್ತೆಮುಂಡೂರು-ಮಾಡತ್ತಾರು ಎಂಬಲ್ಲಿ ಮಂಗಳವಾರ ಜೀಗುಜ್ಜೆ (ದೀವಿ ಹಲಸು) ಕೊಯ್ಯುಲೆಂದು ತೆರಳುತ್ತಿದ್ದ ವೇಳೆ ಅಲ್ಯುಮಿನಿಯಂ ಕೊಕ್ಕೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ಬಿಜೆಪಿ ನಾಯಕಿ, ತಾಪಂ ಮಾಜಿ ಸದಸ್ಯೆ ಯಶೋದಾ ಅವರ ಪತಿ ಕೃಷ್ಣಪ್ಪ ಗೌಡ (49)ಮೃತಪಟ್ಟಿದ್ದಾರೆ.

ಕೃಷ್ಣಪ್ಪ ಗೌಡ ಅವರು ಕೈಯಲ್ಲಿ ಕೊಕ್ಕೆ ಹಿಡಿದುಕೊಂಡಿದ್ದು, ಶಾಕ್ ತಗುಲಿ ಸ್ಥಳದಲ್ಲೇ ಬಿದ್ದಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಆಸ್ಪತ್ರೆಗೆ ತಲುಪುವ ವೇಳೆ ಮೃತಪಟ್ಟಿದ್ದಾರೆ. ಪುತ್ತೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net