

ಬೆಂಗಳೂರು: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ವ್ಯಕ್ತಿಯೊಬ್ಬ ರಸ್ತೆಯಲ್ಲೇ ಬಿದ್ದು ಒದ್ದಾಡಿ ಸಾವಿಗೀಡಾಗಿರುವ ಘಟನೆ ಲಗ್ಗೆರೆಯ ಉದಯಗಿರಿ ಪೆಟ್ರೋಲ್ ಬಂಕ್ ಬಳಿ ಬುಧವಾರ ನಡೆದಿದೆ.
ಬೆಳಗ್ಗೆ 6 ಗಂಟೆಗೆ ಫುಟ್ಪಾತ್ ಮೇಲೆ ಬಿದ್ದು ವ್ಯಕ್ತಿ ಒದ್ದಾಡುತ್ತಿದ್ದ. ಆದರೆ, ಯಾರೊಬ್ಬರು ಸಹಾಯಕ್ಕೆ ಧಾವಿಸಿ ಬರೆದೇ ಇದ್ದುದ್ದರಿಂದ ಒದ್ದಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಮೃತನ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದುಬರೆಬೇಕಿದೆ.
ವ್ಯಕ್ತಿ ಪ್ರಾಣ ಹೋಗಿದ್ದರು ಇನ್ನೂ ಕೂಡ ಆಸ್ಪತ್ರೆಗೆ ಮೃತ ದೇಹ ರವಾನೆಯಾಗಿಲ್ಲ. ಆಂಬ್ಯುಲೆನ್ಸ್ನಿಂದಲೂ ಯಾವುದೇ ಉತ್ತರ ಬಂದಿಲ್ಲ. ಇನ್ನು ಪೊಲೀಸರಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್)