ಅಮ್ಮನ ತಿಥಿ ಮಾಡಲು ಹಿಂದು ಧರ್ಮಕ್ಕೆ ಮರಳಿತು ಕ್ರಿಶ್ಚಿಯನ್ ಕುಟುಂಬ!

14blrp-1a
Published on

ಬೇಲೂರು: ನಾಲ್ಕು ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬವೊಂದು ಮೃತರಾಗಿರುವ ತಮ್ಮ ಮನೆಯ ಹಿರಿಯರ ಆತ್ಮಶಾಂತಿಗಾಗಿ ಉತ್ತರಕ್ರಿಯಾದಿ ಕರ್ಮಗಳನ್ನು ನಿರ್ವಹಿಸುವ ಉದ್ದೇಶದಿಂದ ಭಾನುವಾರ ಹಿಂದು ಧರ್ಮಕ್ಕೆ ಮರಳಿತು.

ತಾಲೂಕಿನ ರಾಮೇನಹಳ್ಳಿ ಗ್ರಾಮದ ತಮ್ಮಯ್ಯ ತಮ್ಮ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ವೀರಾಂಜನೇಯಸ್ವಾಮಿ ದೇಗುಲದ ಸಭಾಂಗಣದಲ್ಲಿ ಹಿಂದು ಜಾಗರಣ ವೇದಿಕೆ ಏರ್ಪಡಿಸಿದ್ದ ಹೋಮ, ಹವನಗಳನ್ನು ನಡೆಸುವ ಮೂಲಕ ಹಿಂದು ಧರ್ಮಕ್ಕೆ ಮರು ಮತಾಂತರಗೊಂಡರು.

ನಂತರ ಮಾತನಾಡಿದ ವಿಎಚ್‌ಪಿ ಮುಖಂಡ ರಾಜಶೇಖರ್, ಇಂದು ಮರುಳು ಮಾತಿಗೆ ಮಾರುಹೋಗಿ ಮತಾಂತರಗೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಯಾವುದೇ ಧರ್ಮವಾಗಿರಲಿ ಜೀವನ ನಡೆಸುವುದಕ್ಕೆ ತಮ್ಮದೇ ಆತ್ಮಬಲ, ದೈಹಿಕಬಲ, ಮನಃಶಾಂತಿ ಬೇಕು. ಮತಾಂತರಗೊಳ್ಳುವುದರಿಂದಲೇ ಸಮಸ್ಯೆ ಬಗೆಹರಿಯಲಿದೆ ಎನ್ನುವುದು ತಪ್ಪು ಕಲ್ಪನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net