

ಪಡುಬಿದ್ರಿ: ಹರ್ನಿಯಾ ಚಿಕಿತ್ಸೆಗೊಳಗಾಗಬೇಕಿದ್ದ ಕಟಪಾಡಿ ಏಣಗುಡ್ಡೆಯ ಶೇಖರ ಎ.ಕೋಟ್ಯಾನ್(73) ಎಂಬುವರು ತೋಟವೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಕಿಗೆ ಬಂದಿದೆ. ವೈದ್ಯರ ಸಲಹೆಯಂತೆ ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಗಿತ್ತು. ಇದರಿಂದ ಹೆದರಿದ ಅವರು ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮನೆಯವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.