ಸಾಲಗಾರರ ಕಿರುಕುಳದಿಂದ ನೊಂದ ವ್ಯಕ್ತಿ ಆತ್ಮಹತ್ಯೆ

gadikoppa vinod kumar
ಗಾಡಿಕೊಪ್ಪದ ವಿನೋದ್ ಕುಮಾರ್
Published on

ಶಿವಮೊಗ್ಗ: ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಸಾಲಗಾರರ ಕಿರುಕುಳದಿಂದ ನೊಂದ ವ್ಯಕ್ತಿಯೊಬ್ಬ ಗಾಡಿಕೊಪ್ಪದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗಾಡಿಕೊಪ್ಪದ ವಿನೋದ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡ ವಿವಾಹಿತ. ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಈತ, ತಾಯಿ ಹಾಗೂ ಪತ್ನಿಯ ಜತೆ ವಾಸವಾಗಿದ್ದ. ಈತನಿಗೆ ಒಂದೂವರೆ ವರ್ಷದ ಮಗುವಿದೆ. ವಿನೋದ್ ಕುಮಾರ್ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಬಡ್ಡಿ ವ್ಯವಹಾರ ನಡೆಸುವ ವ್ಯಕ್ತಿಗಳ ಬಳಿ ಸಾಲ ಪಡೆದಿದ್ದ. ಬಡ್ಡಿ ರೂಪದಲ್ಲಿ ಲಕ್ಷಾಂತರ ರೂ. ಪಾವತಿಸಿದ್ದ. ದುಬಾರಿ ಬಡ್ಡಿ ಕಟ್ಟಲಾಗದೆ ಕಂಗಲಾಗಿದ್ದ.

ಇತ್ತೀಚೆಗೆ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಬಡ್ಡಿ ವ್ಯವಹಾರ ನಡೆಸುವವರ ಕಾಟ ವಿಪರೀತವಾಗಿತ್ತು. ಮೊಬೈಲ್ ಕರೆಗಳ ಮೂಲಕ ಹಾಗೂ ಮನೆಗೆ ಆಗಮಿಸಿ ಸಾಲ ಮರುಪಾವತಿಸುವಂತೆ ಒತ್ತಡ ಹಾಕುವುದರ ಜತೆಗೆ ಬೆದರಿಕೆ ಹಾಕಲಾರಂಭಿಸಿದ್ದರು ಎನ್ನಲಾಗಿದ್ದು, ಸಾಲಗಾರರ ಕಾಟದಿಂದ ಬೇಸತ್ತು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net