

ಉತ್ತರಕನ್ನಡ: ನಿನ್ನೆ ಮೊಸಳೆಯ ಬಾಯಿಗೆ ಸಿಲುಕಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಶನಿವಾರ ಈ ಅವಘಡ ಉಂಟಾಗಿತ್ತು.
ದಾಂಡೇಲಿಯ ವಿನಾಯಕನಗರದ ಅಲೈಡ್ ಬಳಿ ಈ ದುರ್ಘಟನೆ ನಡೆದಿತ್ತು. ಸುರೇಶ್ ವಸಂತ್ ತೇಲಿ (44) ಸಾವಿಗೀಡಾದ ವ್ಯಕ್ತಿ. ನಿನ್ನೆ ಕೆರೆದಂಡೆಯಲ್ಲಿ ಇವರು ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಮೊಸಳೆ ಎಳೆದುಕೊಂಡು ಹೋಗಿತ್ತು.
ರಕ್ಷಣಾ ತಂಡದವರು ಮತ್ತು ಪೊಲೀಸರು ನಿನ್ನೆಯಿಂದ ಶೋಧ ಕಾರ್ಯ ನಡೆಸಿದ್ದರೂ ಪ್ರಯೋಜನ ಆಗಿರಲಿಲ್ಲ. ಆದರೆ ಇಂದು ಕಾಳಿ ನದಿಯ ನೀರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ರಕ್ಷಣಾ ತಂಡಕ್ಕೆ ಇವರ ಶವ ಸಿಕ್ಕಿದೆ. ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.