ನಡು ಬೀದಿಯಲ್ಲೇ ಅಕ್ಕಿ ಮಂಜ ಕೊಲೆ:
ಬಳ್ಳಾರಿಗರನ್ನು ಬೆಚ್ಚಿ ಬೀಳಿಸಿದ ಘಟನೆ

photogrid.collagemaker.photocollage.squarefit_2022928105030148.png
Published on

ಬಳ್ಳಾರಿ: ವ್ಯಕ್ತಿಯೊಬ್ಬರನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ರೇಡಿಯೋ ಪಾರ್ಕ್‌ನ ಅಯ್ಯಪ್ಪ ದೇವಸ್ಥಾನದ ಬಳಿ ತಡ ರಾತ್ರಿ ನಡೆದಿದೆ.
ನಗರದ ಬೀರಪ್ಪಗುಡಿ ಪ್ರದೇಶದ ನಿವಾಸಿ ಮಂಜುನಾಥ @ ಅಕ್ಕಿ ಮಂಜು ಎಂಬಾತ ಕೊಲೆಯಾದ ದುದೈವಿ. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಂಗಳವಾರ ಮಧ್ಯ ರಾತ್ರಿ ೨ ಗಂಟೆ ಸುಮಾರಿಗೆ ಅಕ್ಕಿ ಮಂಜು ಎಂಬಾತನನ್ನು ದುಷ್ಕರ್ಮಿಗಳು ಓಡಿಸಿಕೊಂಡು ಬಂದಿದ್ದಾರೆ. ಮರುಕ್ಷಣವೇ ಅಕ್ಕಿ ಮಂಜುನಾಥನ ಎದೆ ಮೇಲಿನ ಅಂಗಿ ಹಿಡಿದು, ಎಳೆದಾಡಿದ ಆರೋಪಿ, ಬಳಿಕ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಇದೇ ಆಗಮಿಸಿದ ಮತ್ತೊರ್ವ ಆರೋಪಿ ಮಂಜುನಾಥನನ್ನು ನೆಲಕ್ಕೆ ಉರುಳಿಸಿ ಮಾರಕಾಸ್ತ್ರದಿಂದ ಮನಸೋಯಿಚ್ಛೆ ಚುಚ್ಚಿ ಭೀಕರವಾಗಿ ಹತ್ತೆ ನಡೆಸಿದ್ದಾನೆ. ಇದಕ್ಕೂ ಮುನ್ನ ಘಟನಾ ಸ್ಥಳದಲ್ಲಿ ಹರಟುತ್ತಾ ನಿಂತಿದ್ದ ಸಾರ್ವಜನಿಕರು ಮಾರಕಾಸ್ತ್ರಗಳನ್ನು ಕಂಡು ಭಯದಿಂದ ಕಾಲ್ಕಿತ್ತಿದ್ದಾರೆ. ಕೊಲೆಯ ಸಂಪೂರ್ಣ ಚಿತ್ರಣದ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಕೌಲ್ ಬಜಾರ್ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ದಂಧೆ ವಾಸನೆ:
ನಗರದ ಬೀರಪ್ಪಗುಡಿ ಪ್ರದೇಶದ ನಿವಾಸಿಯಾದ ಮಂಜುನಾಥ, ಅಕ್ಕಿ ಮಂಜ ಎಂದೇ ಚಿರಪರಿಚಿತನಾಗಿದ್ದ. ರಿಯಲ್ ಎಸ್ಟೇಟ್ ಜೊತೆಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ, ಇತ್ತೀಚೆಗೆ ಕಣೆಕಲ್ ಬಸ್ ನಿಲ್ದಾಣದ ಬಳಿ ಮಟಕಾ ದಂಧೆ ಆರಂಭಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ಕೊಲೆ ನಡೆದಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net