ಕೊಟ್ಟಿಗೆಗೆ ನುಗ್ಗಿ ಆತ್ಮಹತ್ಯೆಗೆ ಯತ್ನ

Suicide 9 Jul 20
Published on

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿಯ ದರ್ಬೆ ಎಂಬಲ್ಲಿ ಮಂಗಳವಾರ ಯುವಕನೊಬ್ಬ ಮನೆಯ ಕೊಟ್ಟಿಗೆಗೆ ನುಗ್ಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಂಚು ನಾಯ್ಕ ಎಂಬುವರ ಮನೆಗೆ ಬೆಳಗ್ಗೆ 7ರ ಸುಮಾರಿಗೆ ಓಡಿಕೊಂಡು ಬಂದ ಯುವಕ ಮನೆಗೆ ನುಗ್ಗಲು ಯತ್ನಿಸಿದ್ದ. ಮನೆಯವರು ತಡೆದಾಗ ಕೊಟ್ಟಿಗೆಗೆ ನುಗ್ಗಿ ಬಾಗಿಲು ಹಾಕಿಕೊಂಡ. ಅಪರಿಚಿತನ ಈ ವರ್ತನೆ ಕಂಡು ಕಂಗೆಟ್ಟ ಮನೆಮಂದಿ ನೆರೆಹೊರೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳೀಯರು ಈತನನ್ನು ವಿಚಾರಿಸಲು ಬಲವಂತದಿಂದ ಬಾಗಿಲು ತೆರೆದಾಗ ಆತ ಕೊಟ್ಟಿಗೆಯೊಳಗೆ ಶಾಲಿನಿಂದ ನೇಣು ಬಿಗಿದುಕೊಂಡಿದ್ದ. ಊರವರು ಕೂಡಲೇ ಆತನನ್ನು ರಕ್ಷಿಸಿ ಉಪಚರಿಸಿದರು. ವಿಚಾರಿಸಿದಾಗ ಈತ ಮಂಜಲಪಡ್ಪು ಸಮೀಪದ ಚೇವುರೆ ನಿವಾಸಿ ರಮೇಶ (28) ಎಂದು ಗೊತ್ತಾಗಿದೆ. ಈತ ಮಾನಸಿಕವಾಗಿ ಅನಾರೋಗ್ಯದಿಂದ ಬಳಲುತ್ತಿರುವ ವಿಷಯ ತಿಳಿದುಬಂದಿದೆ. ಬಳಿಕ ಪೊಲೀಸರು ಆತನನ್ನು ಪಾಲಕರ ಜತೆಗೆ ಕಳುಹಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net