ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ ಯುವತಿ ಜತೆ ಅನುಚಿತ ವರ್ತನೆ, ಆರೋಪಿ ಬಂಧನ

Mohammad Mustafa
Published on

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಮಂಗಳವಾರ ಯುವಕನೋರ್ವ ಯುವತಿ ಜತೆ ಅನುಚಿತವಾಗಿ ವರ್ತಿಸಿದ್ದು, ಆರೋಪಿಯನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿ.ಸಿ.ರೋಡ್‌ನ ಮಹಮ್ಮದ್ ಮುಸ್ತಫಾ ಬಂಧಿತ. ಜೂ. 6ರಂದು ರಾತ್ರಿ ಶರ್ಲಿನ್ ಮಾರ್ತಾ ಎಂಬ ಯುವತಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಬಂದಿದ್ದು, ಬೆಳಗ್ಗೆ 5 ಗಂಟೆಗೆ ಬಸ್ ಮಂಗಳೂರು ತಲುಪುತ್ತಿದ್ದಾಗ ಮಹಮ್ಮದ್ ಮುಸ್ತಫಾ ಅನುಚಿತವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಯುವತಿ ಸಹ ಪ್ರಯಾಣಿಕರಲ್ಲಿ ತಿಳಿಸಿದ್ದು, ಕೂಡಲೇ ಇತರ ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ. ಆದರೆ, ಇತರ ಪ್ರಯಾಣಿಕರಲ್ಲಿ ನೀವೇನು ಮಾಡುತ್ತೀರಿ? ಎಂದು ಜೋರು ದನಿಯಲ್ಲಿ ಪ್ರಶ್ನಿಸಿ ಉಡಾಫೆಯಾಗಿ ವರ್ತಿಸಿದ್ದಾನೆ.

ವಾಗ್ವಾದ ನಡೆಯುತ್ತಿರುವಾಗಲೇ ಬಸ್ ಮಂಗಳೂರಿನ ಪಂಪುವೆಲ್ ತಲುಪಿದ್ದು, ಅಲ್ಲಿ ಬಸ್ ನಿಲ್ಲುತ್ತಿದ್ದಂತೆ ಆರೋಪಿ ಯುವಕ ಇಳಿದು ತಪ್ಪಿಸಿಕೊಂಡಿದ್ದ, ಯುವತಿ ಕಂಪನಿಯೊಂದರಲ್ಲಿ ಸಂದರ್ಶನ ಇದ್ದ ಕಾರಣಕ್ಕೆ ಮಂಗಳೂರಿಗೆ ಬಂದಿದ್ದಳು. ಸಂದರ್ಶಣ ಮುಗಿಸಿದ ಬಳಿಕ ಜೂನ್ 7ರಂದು ಸಂಜೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net