ನವಿಲು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಗಳ ಬಂಧನ

MDK04
Published on

ಮಡಿಕೇರಿ: ನವಿಲನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿರುವ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸರು ನವಿಲನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.


ಜೆ.ಎಂ.ಕಾರ್ತಿಕ್, ಎಸ್.ಎಚ್.ಹರೀಶ್ ಬಂಧಿತರು.


ಇವರು ಮಡಿಕೇರಿ ಸುಂಟಿಕೊಪ್ಪ ರಸ್ತೆಯಲ್ಲಿ ಮೀಸಲು ಅರಣ್ಯಕ್ಕೆ ಹೋಗುವ ಮುಖ್ಯರಸ್ತೆ ಬದಿಯಲ್ಲಿ ನವಿಲನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.


ಕಾರ್ಯಚರಣೆ ತಂಡದಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಎಸ್.ಪಿ ಕೆ.ಬಿ.ವಿಶ್ವನಾಥ್, ಸಬ್ ಇನ್‌ಸ್ಪೆಕ್ಟರ್ ಸವಿ, ಹೆಡ್ ಕಾನ್‌ಸ್ಟೆಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ್, ಕಾನ್‌ಸ್ಟೆಬಲ್‌ಗಳಾದ ಸ್ವಾಮಿ ಹಾಗೂ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net