

ಭಟ್ಕಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಶಿರಾಲಿ ಚೆಕ್ಪೋಸ್ಟ್ ಹತ್ತಿರ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಣದ ಶಂಕರ ಅನಂತ ದೇವಡಿಗೆ ಬಂಧಿತ. ಸಾಗಾಣಿಕೆಯ ಯಾವುದೇ ಪಾಸ್ ಇಲ್ಲದೇ ವಾಹನದಲ್ಲಿ ಮರಳು ಸಾಗಿಸುತ್ತಿದ್ದ ವೇಳೆ ಸಿಪಿಐ ಮಂಜುನಾಥ ಅಂಗಾರೆಡ್ಡಿ ವಾಹನ ತಪಾಸಣೆ ನಡೆಸಿದ್ದು, ಅಕ್ರಮ ಮರಳು ಸಾಗಾಟ ಖಚಿತವಾಗಿದೆ.
ಮರಳು ಕಳ್ಳತನದಿಂದ ಪರಿಸರ ಹಾನಿ ಹಾಗೂ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಅಂಗಾರೆಡ್ಡಿ ಅವರ ದೂರಿನ ಮೇರೆಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.