

ಗುಂಡ್ಲುಪೇಟೆ: ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಪಂಪ್‌ಸೆಟ್‌ಗಳಲ್ಲಿ ಕೇಬಲ್ ಕದಿಯುತ್ತಿದ್ದ ಕಳ್ಳನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಗುಜರಿಯಲ್ಲಿ ಕೆಲಸ ಮಾಡುವ ನದೀಂ(21) ಬಂಧಿತ ಆರೋಪಿ. ಬುಧವಾರ ಸೋಮಹಳ್ಳಿ ಗ್ರಾಮದ ಶಿವಶಂಕರ್ ಅವರ ಜಮೀನಿನಲ್ಲಿ ಕೇಬಲ್ ಕತ್ತರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಬೇಗೂರು ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.