

ಶಿರಸಿ: ತಾಲೂಕಿನ ಅಗಸಾಲ ಬೊಮ್ನಳ್ಳಿಯಲ್ಲಿ ಅಡಕೆ ಕದ್ದಿದ್ದ ಕಳ್ಳನನ್ನು ಗ್ರಾಮೀಣ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ತಾಲೂಕಿನ ಬೊಮ್ಮನಳ್ಳಿಯ ಪ್ರಭಾಕರ ಗಣಪತಿ ಬಂಡಾರಿ ಬಂಧಿತ.
ಆರೋಪಿಯಿಂದ 30 ಸಾವಿರ ರೂ. ಬೆಲೆಯ 75 ಕೆ.ಜಿ. ಸುಲಿದ ಆಡಿಕೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ಸೋಮವಾರ ಸಂಜೆ ಅಡಕೆ ಕಳ್ಳತನ ಮಾಡಿದ್ದ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.