ಯೋಧರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದವನ ವಿರುದ್ಧ ಕೇಸ್

yash
Published on

ರೋಣ: ಭಾರತ ಹಾಗೂ ಚೀನಾ ನಡುವೆ ನಡೆದ ಸಂಘರ್ಷದಲ್ಲಿ ವೀರ ಮರಣವನ್ನಪ್ಪಿದ ಭಾರತೀಯ ಸೈನಿಕರಿಗಾಗಿ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಇಂಥ ಸಂದರ್ಭದಲ್ಲಿ ಇಲ್ಲೊಬ್ಬ ಕಿಡಿಗೇಡಿ ಯುವಕ ಭಾರತೀಯ ಸೈನಿಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿ ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಮೂಲತಃ ಮುನವಳ್ಳಿ ಗ್ರಾಮದವನಾದ ಹಾಲಿ ರೋಣದಲ್ಲಿ ವಾಸಿಸುತ್ತಿರುವ ಬಸವರಾಜ ಪಂಚಪ್ಪ ಗೋಮಾಡಿ (ಸಂಗಳದ) ‘ಇನ್ನೂ ಹೆಚ್ಚೆಚ್ಚು ಭಾರತೀಯ *** ಸೈನಿಕರನ್ನು ಚೀನಾದವರು ಕೊಲ್ಲಲಿ. ಈ ದರಿದ್ರ ಭಾರತವನ್ನು ಸರ್ವನಾಶ ಮಾಡಲಿ’ ಎಂದು ಪೋಸ್ಟ್ ಮಾಡಿದ್ದಾನೆ. ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಗಮನಿಸಿದ ರೋಣ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಯುವಕನ ಪತ್ತೆಗೆ ಜಾಲ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net