ಅಶ್ಲೀಲವಾಗಿ ವರ್ತಿಸಿದ್ದವನ ಬಂಧನ

crime
Published on

ಹುಬ್ಬಳ್ಳಿ: ಬಾಲಕನೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದ ವ್ಯಕ್ತಿಯನ್ನು ಇಲ್ಲಿಯ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಹಳೇ ಹುಬ್ಬಳ್ಳಿಯ ಸಿರಾಜ್ ಬಂಧಿತ. ಬಾಲಕನನ್ನು ಮುಳ್ಳಿನ ಕಂಟಿಯೊಳಗೆ ಕರೆದುಕೊಂಡು ಹೋಗಿ ಅಶ್ಲೀಲವಾಗಿ ವರ್ತಿಸಿದ್ದ. ಈ ಮೊದಲು ಕೂಡ ಈ ರೀತಿಯ ವರ್ತನೆ ಸರಿಯಲ್ಲವೆಂದು ಬಾಲಕನ ಕುಟುಂಬದವರು ತಿಳಿ ಹೇಳಿದ್ದರೂ ಮತ್ತೆ ಅದೇ ಚಾಳಿ ಮುಂದುವರಿಸಿದ್ದ. ಬಾಲಕನನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಕೂಡಲೇ ಸಿರಾಜ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜೈ ಭೀಮ ಯುವ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಬೂದೂರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net