ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದವನ ಬಂಧನ

26MDG1
Published on

ಮೂಡಿಗೆರೆ: ರಾತ್ರಿ ವೇಳೆ ಮನೆ ಕಳ್ಳತನಕ್ಕೆ ಹೊಂಚು ಹಾಕಿ ಕುಳಿತ್ತಿದ್ದ ಕಳ್ಳನನ್ನು ಸಾರ್ವಜನಿಕರು ಸಿನಿಮೀಯ ರೀತಿಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಛತ್ರಮೈದಾನ ಬಡಾವಣೆಯ ನಿವಾಸಿ ಸುಭಾಷ್ ಬಂಧಿತ ಆರೋಪಿ.

ಪಟ್ಟಣದ ಬಸ್‌ನಿಲ್ದಾಣ ಸಮೀಪದ ತತ್ಕೊಳ ರಸ್ತೆಯ ಮನೆಗೆ ನುಗ್ಗಿ ಕಳ್ಳತನ ನಡೆಸಲು ಹೊಂಚು ಹಾಕುತ್ತಾ ಮನೆ ಆವರಣದಲ್ಲಿ ನಿಲ್ಲಿಸಿದ್ದ ಎರಡು ಸೈಕಲ್ಗಳನ್ನು ಕೊಂಡೊಯ್ಯಲು ಯತ್ನಿಸುತ್ತಿದ್ದನು. ಇದನ್ನು ನೋಡಿದ ಸ್ಥಳೀಯರು ಕಳ್ಳ ಕಳ್ಳ ಎಂದು ಕೂಗಿಕೊಂಡಿದ್ದಾರೆ. ಸ್ಥಳದಲ್ಲಿ ಜನ ಜಮಾಯಿಸುವುದನ್ನು ತಿಳಿದ ಆರೋಪಿ ತತ್ಕೊಳ ರಸ್ತೆಯ ಅಂಬೇಡ್ಕರ್ ಭವನದ ಎದುರಿನ ಕಟ್ಟಡದ ಮಹಡಿಯನ್ನು ಹತ್ತಿ ಅಲ್ಲಿನ ಮನೆಗಳಿಗೆ ನುಗ್ಗಲು ಯತ್ನಿಸಿದ್ದಾನೆ.

ಸ್ಥಳೀಯರು ತತ್ಕೊಳ ರಸ್ತೆ, ಜೆ.ಎಂ.ರಸ್ತೆ ಮತ್ತು ಹೊಯ್ಸಳ ಕ್ರೀಡಾಂಗಣದ ರಸ್ತೆಯ ಕಳ್ಳನಿಗಾಗಿ ಹುಡುಕಾಟ ನಡೆಸುತಿದ್ದಾಗ ಮನೆಯ ಮೇಲೆ ಕಳ್ಳ ಇರುವುದು ತಿಳಿದುಬಂದಿದೆ. ಪೊಲೀಸರಿಗೆ ವಿಷಯ ತಿಳಿಸಿದ ಸಾರ್ವಜನಿಕರು, ಕಟ್ಟಡದ ಮೇಲೆ ಕಳ್ಳನನ್ನು ಹಿಡಿಯಲು ಯತ್ನಿಸಿದಾಗ ಕಳ್ಳ ಕಟ್ಟಡದಿಂದ, ಕಟ್ಟಡಕ್ಕೆ ಜಿಗಿದಿದ್ದಾನೆ. ಹೀಗೆ ಎಂಟು ಕಟ್ಟಡದ ಮೇಲಿ ಜಿಗಿದು ಸಾಗುವಾಗ ಶೀಟ್ ತುಂಡಾಗಿ ಕೆಳಕ್ಕೆ ಬಿದ್ದಿದ್ದಾನೆ. ಆಗಲೆ ಸ್ಥಳೀಯರ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇವನು ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ ಮನೆ ಅಥವ ವ್ಯಾಪಾರ ಕೇಂದ್ರಗಳನ್ನು ಹೊರತು ಪಡಿಸಿ ಉಳಿದ ಕಡೆ ಕಳವು ಮಾಡುತ್ತಿದ್ದ. ತನ್ನ ಗುರುತು ತಿಳಿಯಬಾರದು ಎಂದು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net