ಸಾಂಪ್ರದಾಯಿಕ ನೇಯ್ಗೆಯ ಪುನರುಜ್ಜೀವನ ಅವಶ್ಯ -ಕದಿಕೆ ಟ್ರಸ್ಟ್‌ನ ಸಂಸ್ಥಾಪಕಿ ಮಮತಾ ರೈ ಆಶಯ

yyyyyyyyy
Published on


ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್(ಇಂಟಾಕ್) ಇದರ ಮಂಗಳೂರು ಘಟಕದ ವತಿಯಿಂದ ನಗರದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ
‘ಸಾಂಪ್ರದಾಯಿಕ ನೇಯ್ಗೆಯ ಪುನರುಜ್ಜೀವನ : ಉಡುಪಿ ಸೀರೆ ‘ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.’
ಮುಖ್ಯ ಭಾಷಣಕಾರರಾದ ಕದಿಕೆ ಟ್ರಸ್ಟ್‌ನ ಸಂಸ್ಥಾಪಕಿ ಮಮತಾ ರೈ ಮಾತನಾಡಿ ‘ ಉಡುಪಿ ಮತ್ತು ದ.ಕ ಜಿಲ್ಲೆಗಳ ನೇಕಾರರೊಂದಿಗೆ ಕದಿಕೆ ಟ್ರಸ್ಟ್ ನಿಕಟವಾಗಿ ಕೆಲಸ ಮಾಡುತ್ತಿದ್ದು ಪಾರಂಪರಿಕ ಕರಕುಶಲತೆಯನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಬಹುತೇಕ ನೇಕಾರರು ಮೂರು ದಶಕಗಳ ಹಿಂದೆಯೇ ಈ ಕಲೆಗಳನ್ನು ತೊರೆದಿದ್ದರು. ವ್ಯಾಪಕವಾದ
ಸಂಶೋಧನೆ, ನೇಯ್ಗೆ ಸಮುದಾಯಗಳಲ್ಲಿ ನಂಬಿಕೆ ನಿರ್ಮಾಣ, ತರಬೇತಿ ಕಾರ್ಯಕ್ರಮ , ಬ್ರಾೃಂಡಿಂಗ್ ಮತ್ತು ಜಾಗೃತಿ ಅಭಿಯಾನಗಳನ್ನು ಯುವ ಪೀಳಿಗೆಯ ನೇಕಾರರನ್ನು ಆಕರ್ಷಿಸಲಾಗಿದೆ. ಉಡುಪಿ ಸೀರೆಗಳು ತಮ್ಮ ಸರಿಯಾದ ಸ್ಥಾನವನ್ನು ಸ್ಥಿರವಾಗಿ ಮರಳಿ ಪಡೆಯುತ್ತಿವೆ ಎಂದರು
ಶರ್ವಾಣಿ ಭಟ್ ಉಪನ್ಯಾಸಕರನ್ನು ಪರಿಚಯಿಸಿದರು. ಇಂಟಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಸ್ ಚಂದ್ರ ಬಸು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net