ಮಮದಾಪುರ ಗ್ರಾಪಂಗೆ ಪ್ರಶಸ್ತಿ ಗರಿ

4mamadapur1
Published on

ಮಮದಾಪುರ: ಇಲ್ಲಿನ ಗ್ರಾಮ ಪಂಚಾಯಿತಿ ಮತ್ತು ಹೂಲಿಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ 2025-26ನೇ ಸಾಲಿನ ‘ಇಂದಿರಾ ಪ್ರಿಯದರ್ಶಿ ಪರಿಸರ ಮಿತ್ರ’ ಪ್ರಶಸ್ತಿ ಲಭಿಸಿದೆ.

ಬೆಳಗಾವ ನಗರದ ಸಿಪಿಇಡಿ ಮೈದಾನದಲ್ಲಿ ಈಚೆಗೆ ಜರುಗಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು.

ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ ಭಜಂತ್ರಿ, ಉಪಾಧ್ಯಕ್ಷೆ ಸುನಂದಾ ಮುರುಗೋಡ, ಪಿಡಿಒ ವಿನಾಯಕ ಮಾಳಿ, ಮುಖ್ಯಶಿಕ್ಷಕ ಜೆ.ಜೆ.ರಾಯಿ, ಶಿಕ್ಷಕ ಎಂ.ಎಸ್.ನಾಗರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net