ಮಮದಾಪುರ ಭರಮದೇವರ ಜಾತ್ರೋತ್ಸವ ನಾಳೆಯಿಂದ

16Mamadapur1
Published on

ಮಮದಾಪುರ: ಗ್ರಾಮದ ಭರಮದೇವರ ಜಾತ್ರಾ ಮಹೋತ್ಸವ ಅ.18ರಿಂದ 20ರ ವರೆಗೆ ಜರುಗುವುದು. 18ರಂದು ಸಂಜೆ 5ಕ್ಕೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ದೇವರ ಪಲ್ಲಕ್ಕಿ ಆಗಮನ, ರಾತ್ರಿ 10ಕ್ಕೆ ಡೊಳ್ಳಿನ ಪದಗಳು, ರಾತ್ರಿ 12ರಿಂದ ಬೆಳಗಿನ 6ರ ವರೆಗೆ ಡೊಳ್ಳಿನ ವಾಲಗ ನಡೆಯಲಿದೆ. 19ರಂದು ಬೆಳಗ್ಗೆ 6ಕ್ಕೆ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ನೆರವೇರಲಿದೆ. ನಂತರ ಎಲ್ಲ ದೇವರ ಪಲ್ಲಕ್ಕಿಗಳ ಉಡಿ ತುಂಬುವ ಕಾರ್ಯಕ್ರಮ ನೆರವೇರುವುದು. ಬೆಳಗ್ಗೆ 9ಕ್ಕೆ ಗ್ರಾಮಸ್ಥರಿಂದ ನೆವೇದ್ಯ ಸಮರ್ಪಣೆ, 11ಕ್ಕೆ ಮಹಾಪ್ರಸಾದ ಏರ್ಪಡಿಸಲಾಗಿದೆ. ಡೊಳ್ಳಿನ ಪದಗಳ ಗಾಯನಕ್ಕೆ ಸ್ಥಳಿಯ ಚರಮೂರ್ತಿಶ್ವರ ಸ್ವಾಮೀಜಿ ಚಾಲನೆ ನೀಡುವರು. ಶಾಸಕ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಅಮರನಾಥ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯರಾದ ಟಿ.ಆರ್​.ಕಾಗಲ್​, ಮಡ್ಡೆಪ್ಪ ತೋಳಿನವರ ಆಗಮಿಸಲಿದ್ದಾರೆ. ರಾತ್ರಿ 10.30ಕ್ಕೆ ಬಂಡಾಯ ಎಬ್ಬಿಸಿದ ಬಂಡಾರದ ಹುಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. 20ರಂದು ಬೆಳಗ್ಗೆ 7ಕ್ಕೆ ಎಲ್ಲ ದೇವರ ಪಲ್ಲಕ್ಕಿಗಳ ಪೂಜೆ ನೆರವೇರುವುದು. ಬಳಿಕ ಭಂಡಾರ ಅರ್ಪಣೆ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುವುದು ಎಂದು ಜಾತ್ರಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net