ಆಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ

230520 Raichuru Mamadapura Ambulance Twins Birth
Published on

ರಾಯಚೂರು: ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತರುವ ವೇಳೆ ಗರ್ಭಿಣಿಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲೂಕಿನ ಮಮದಾಪುರ ಗ್ರಾಮದ ಗರ್ಭಿಣಿ ಖಾಜಾಬಿ ಖಾಜಾ ಹುಸೇನ್ ಕುಟುಂಬದವರು 108 ಸಹಾಯವಾಣಿಗೆ ಶನಿವಾರ ಬೆಳಗ್ಗೆ ಕರೆ ಮಾಡಿದ್ದಾರೆ. ತಕ್ಷಣ ಗ್ರಾಮಕ್ಕೆ ಅಂಬುಲೆನ್ಸ್ ತಲುಪಿ ನೋವು ಕಾಣಿಸಿಕೊಂಡ ಮಹಿಳೆ ಸೇರಿ ಇನ್ನಿಬ್ಬರನ್ನು ವಾಹನದಲ್ಲಿ ನಗರದಲ್ಲಿನ ರಿಮ್ಸ್‌ಗೆ ಕರೆ ತರಲಾಗುತ್ತಿತ್ತು. ಮಾರ್ಗ ಮಧ್ಯೆ ಹೆಚ್ಚಿನ ನೋವು ಕಾಣಿಸಿಕೊಂಡಿದ್ದರಿಂದ ವಾಹನದಲ್ಲಿದ್ದ ಶುಶ್ರೂಷಕ ಗೋವಿಂದ, ಚಾಲಕ ಕಾಸಿಂ ಅಲಿ ಮತ್ತಿಬ್ಬರ ಮಹಿಳೆಯರ ಸಹಕಾರದೊಂದಿಗೆ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಗಂಡು, ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಂತರ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net