ರಾಷ್ಟ್ರೀಯ ಬಾಹ್ಯಕಾಶ ದಿನಾಚರಣೆ

udp-14-malpe
Published on

ಉಡುಪಿ: ಇಸ್ರೋ ಭಾರತ ದೇಶದ ಹೆಮ್ಮೆಯ ಸಂಸ್ಥೆಯಾಗಿದೆ. ಮೀನುಗಾರರ ಭದ್ರತೆಯ ಉದ್ದೇಶದಿಂದ ಸಮುದ್ರದಲ್ಲಿ ಮೀನುಗಾರರಿಗೆ ತೊಂದರೆ ಉಂಟಾದಾಗ ಸ್ಯಾಟಲೈಟ್​ ಮೂಲಕ ಅಪಾಯಕ್ಕೊಳಗಾದ ಮೀನುಗಾರರೊಂದಿಗೆ ಸಂಪರ್ಕ ಹೊಂದಿ, ಅಗತ್ಯ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಮೀನುಗಾರರ ಸಂರಕ್ಷಣೆಯ ನಿಟ್ಟಿನಲ್ಲಿ ಇಲಾಖೆ ಸ್ಪಂದಿಸಬೇಕು ಎಂದು ಮಲ್ಪೆ ಫಿಶರೀಸ್​ ಒಕ್ಕೂಟದ ಅಧ್ಯಕ್ಷ ದಯಾನಂದ ಸುವರ್ಣ ಹೇಳಿದರು.

ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಬುಧವಾರ ಮೀನುಗಾರಿಕೆ ಇಲಾಖೆಯ ವತಿಯಿಂದ ರಾಷ್ಟ್ರೀಯ ಬಾಹ್ಯಕಾಶ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಿ.ಐ.ಸಿ.ಇ.ಎಫ್​ ನ ಉಪನಿರ್ದೇಶಕ ಎನ್​. ಕೆ. ಪಾತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶ ಬಾಹ್ಯಾಕಾಶದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದೆ. ಇದರಿಂದಾಗಿ ಸಮಾಜಕ್ಕೆ ಹಲವು ಪ್ರಯೋಜನಗಳು ಸಹ ಆಗಿವೆ ಎಂದರು. ಇಸ್ರೋದ ವಿಜ್ಞಾನಿ ನಕುಲ್​ ಪಾಥಕ್​ ಮೀನುಗಾರರೊಂದಿಗೆ ವರ್ಚುವಲ್​ ಮೂಲಕ ಸಂವಾದ ನಡೆಸಿದರು. ಶ್ರೀಕಾಂತ್​ ಉಪಸ್ಥಿತರಿದ್ದರು. ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಯು. ಮಹೇಶ್​ ಕುಮಾರ್​ ಸ್ವಾಗತಿಸಿ, ಮಲ್ಪೆ ಮೀನುಗಾರಿಕಾ ಬಂದರಿನ ಉಪನಿರ್ದೇಶಕಿ ಸರಿತಾ ಖಾದ್ರಿ ನಿರೂಪಿಸಿ, ಸಿ.ಐ.ಸಿ.ಇ.ಎಫ್​ ಸಹಾಯಕ ನಿರ್ದೇಶಕಿ ದಿವ್ಯ ಶರ್ಮ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net