

ಉಡುಪಿ: ಮಲ್ಪೆ ಕಡಲತೀರದಲ್ಲಿ ಮಲ್ಪೆ ಮೀನುಗಾರ ಸಂಗ ನೇತೃತ್ವದಲ್ಲಿ ಮೀನುಗಾರರು ಗುರುವಾರ ಸುಗಮ ಮೀನುಗಾರಿಕೆಗೆ ಪ್ರಾರ್ಥಿಸಿ ಗಂಗಾಮಾತೆಗೆ ಕ್ಷೀರ, ಪುಷ್ಪವನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ ವಡಭಾಂಡ ಬಲರಾಮ ದೇವರು ಹಾಗೂ ಬೊಬ್ಬರ್ಯ ದೈವಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಾಲಕೃಷ್ಣ ತಂತ್ರಿ ಹಾಗೂ ಶ್ರೀನಿವಾಸ್ ಭಟ್ ಧಾರ್ಮಿಕ ವಿಧಿ ವಿಧಾನ ನೇತೃತ್ವ ವಹಿಸಿದ್ದರು. ಬಳಿಕ ಮೀನುಗಾರರು ಶೋಭಾಯಾತ್ರೆಯಲ್ಲಿ ತೆರಳಿ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಪೂಜೆಯನ್ನು ನಡೆಸಿದರು. ಬಳಿಕ ಮೀನುಗಾರರು ಹಾಲು, ಪುಷ್ಪ, ಸೀಯಾಳವನ್ನು ಸಮುದ್ರ ರಾಜನಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಚ್ಚಿಲ ಮೊಗವೀರ ಮಹಾಜನ ಸಂದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉದ್ಯಮಿ ಪ್ರಸಾದ್ರಾಜ್ ಕಾಂಚನ್, ಮೀನುಗಾರ ಸಂದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಕೋಶಾಧಿಕಾರಿ ಪ್ರಕಾಶ್ ಬಂಗೇರ, ಪ್ರಮುಖರಾದ ನಾಗರಾಜ್ ಬಿ. ಕುಂದರ್, ರಮೇಶ್ ಕೋಟ್ಯಾನ್, ನಾಗರಾಜ್ ಸುವರ್ಣ, ಕಿಶೋರ್ ಡಿ. ಸುವರ್ಣ, ರತ್ನಾಕರ್ ಸಾಲ್ಯಾನ್, ಕಿಶೋರ್ ಕುಮಾರ್, ಧನಂಜಯ್ ಕಾಂಚನ್, ಶಿವಪ್ಪ ಕಾಂಚನ್, ಸತೀಶ್ ಕುಂದರ್, ರಾವ ಜಿ.ಕೆ., ಕರುಣಾಕರ್ ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ಗುಂಡು ಬಿ. ಅಮೀನ್, ಆನಂದ ಪಿ. ಸುವರ್ಣ, ಹಿರಿಯಣ್ಣ ಟಿ. ಕಿದಿಯೂರು, ರಾಮಚಂದ್ರ ಕುಂದರ್, ಸುಭಾಷ್ ಎಸ್. ಮೆಂಡನ್, ಕೇಶವ ಕೋಟ್ಯಾನ್, ಶಿವಾನಂದ, ಶಂಕರ ಬಂಗೇರ, ವಿಠಲ ಕರ್ಕೇರ, ಗೋಪಾಲ ಅರ್. ಕೆ, ದಯಾನಂದ ಕುಂದರ್, ಪ್ರಭಾಕರ ಸುವರ್ಣ, ಕೃಷ್ಣ ಎಸ್. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.