ವಿಷಾನಿಲದಿಂದ ಈಶ್ವರ ಮಲ್ಪೆ ಸಹಿತ ಇಬ್ಬರು ಮೀನುಗಾರರು ಅಸ್ವಸ್ಥ

udp-eshwara malpe
Published on

ಉಡುಪಿ: ಬೋಟಿನ ಸ್ಟೋರೆಜ್​ ರೂಮಿನಲ್ಲಿದ್ದ ಮೀನಿನಿಂದ ಹೊರ ಸೂಸಿದ ವಿಷಾನಿಲದಿಂದಾಗಿ ಜೀವರಕ್ಷಕ ಈಶ್ವರ ಮಲ್ಪೆ ಸೇರಿದಂತೆ ಇಬ್ಬರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಶನಿವಾರ ರಾತ್ರಿ ಮಲ್ಪೆ ಬಂದರಿನಲ್ಲಿ ನಡೆದಿದೆ.

ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರಿಗೆ ವಾಪಸಾದ ಬಳಿಕ ಮಿನುಗಾರರೊಬ್ಬರು ಸ್ಟೋರೇಜ್​ ರೂಮಿಗೆ ಇಳಿದು ಮೀನು ಖಾಲಿ ಮಾಡುತ್ತಿದ್ದಾಗ ವಿಷಾನಿಲ ಮಿಥೇನಿಯಂ ಹೊರಬಂದು ಅಲ್ಲೇ ಅಸ್ವಸ್ಥಗೊಂಡಿದ್ದರು. ಅವರನ್ನು ರಸಲು ಮುಂದಾದ ಈಶ್ವರ ಮಲ್ಪೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿದ್ದರು. ಬಳಿಕ ಚೇತರಿಸಿಗೊಂಡು ಮೀನುಗಾರನನ್ನು ರಕ್ಷಿಸಿದರು. ಬಳಿಕ ಇವರಿಬ್ಬರನ್ನು ಆಂಬುಲೆನ್ಸ್​ ಮೂಲಕ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಈಶ್ವರ ಮಲ್ಪೆ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಕಳೆದ 1 ವಾರದಿಂದ ಇಂಥ ಎರಡನೇ ಟನೆ ನಡೆಯುತ್ತಿದ್ದು, ಮೀನುಗಾರರು ಎಚ್ಚರವಹಿಸುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net