ಬೋಟ್‌ನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ

MALPE 1
Published on

ಡುಪಿ: ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ತಯಾರಿ ನಡೆಸುತ್ತಿರುವಾಗ ತಮಿಳುನಾಡು ಮೂಲದ ಕಾರ್ಮಿಕನೊಬ್ಬ ಬೋಟಿನ ಹಿಂಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋದಾಗ ಆಯತಪ್ಪಿ ಬೋಟಿನಿಂದ ಧಕ್ಕೆಯ ನೀರಿನಲ್ಲಿ ಬಿದ್ದು ಮುಳುಗಿ ಕಾಣೆಯಾಗಿದ್ದಾರೆ.

ಗಣೇಶನ್(51) ನಾಪತ್ತೆಯಾದ ಮೀನುಗಾರ. ಇಮ್ಯಾನುವೆಲ್ ಕಿರಣ್ ಒಡೆತನದ ರಾಯಲ್ ಫಿಶರ್ ಬೋಟ್ನಲ್ಲಿ ಮೀನುಗಾರಿಕೆ ನಡೆಸಲು ಆ.1ರಂದು ತಮಿಳುನಾಡಿನಿಂದ ಆಗಮಿಸಿದ್ದರು. ಮಲ್ಪೆ ಬಂದರಿನಲ್ಲಿ ಮಂಜಿ ಧಕ್ಕೆಯಲ್ಲಿ ಮಂಗಳವಾರ ಸಾಯಂಕಾಲ ನೀರಿಗೆ ಬಿದ್ದ ಗಣೇಶನ್ ಇವರನ್ನು ನೀರಿನಲ್ಲಿ ಹುಡುಕಾಡಿದರೂ ಶವ ಪತ್ತೆಯಾಗಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net