ಮಲ್ಪೆಯಲ್ಲಿ ಸಮುದ್ರಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ

drowning-12
Published on

ಉಡುಪಿ: ಮಲ್ಪೆ ಸಮುದ್ರದಲ್ಲಿ ಈಜಲು ತೆರಳಿಗೆ ಅಲೆಗಳ ಸೆಳೆಯಕ್ಕೆ ಸಿಲುಕಿ ಮುಳುಗುತ್ತಿದ್ದ ಕಲಬುರ್ಗಿಯ ಮೂವರು ಪ್ರವಾಸಿಗರು ಮತ್ತು ಮಂಡ್ಯದ ಒಬ್ಬ ಪ್ರವಾಸಿಯನ್ನು ಗುರುವಾರ ರಕ್ಷಿಸಲಾಗಿದೆ.

ಕಲಬುರಗಿ ರಾಮಮಂದಿರ ನಿವಾಸಿಗಳಾದ ಅನಿಲ್ ಕುಮಾರ್ (21), ಹಗರ್ಗ ನಿವಾಸಿ ಅಬ್ಬಾಸ್ ಅಲಿ (19) ಮತ್ತು ಅನಿಲ್ ಕುಮಾರ್ (21) ರಕ್ಷಿಸಲ್ಪಟ್ಟವರು. ಮತ್ತೊಂದು ಘಟನೆಯಲ್ಲಿ ಮಂಡ್ಯ ಜಿಲ್ಲೆ ನೆರಕೆರೆ ಗ್ರಾಮದ ನಿತಿನ್ (18) ಎಂಬುವರನ್ನು ಮಲ್ಪೆ ಜೀವರಕ್ಷಕ ತಂಡ ರಕ್ಷಿಸಿದೆ. ಬುಧವಾರ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಕ್ಕಿದ್ದ ಶಿವಮೊಗ್ಗದ ಮೂವರು ವಿದ್ಯಾರ್ಥಿಗಳನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net