

ಉಡುಪಿ: ಬೆಳ್ತಂಗಡಿಯ ಹಳ್ಳಿ ಹಳ್ಳಿ ಗಳಲ್ಲಿ ಮತಾಂತರಕ್ಕೆ ಹೊಂಚು ಹಾಕುತ್ತಿರುವವರಿಗೆ ಧರ್ಮಸ್ಥಳದ ಸಮಾಜಮುಖಿ ಕಾರ್ಯಗಳು ಬಹುದೊಡ್ಡ ಅಡ್ಡಿಯಾಗಿದೆ. ಧರ್ಮಸ್ಥಳ ಕುಸಿದರೆ ಹಿಂದೂ ಧರ್ಮಕ್ಕೆ ಅಪಾರ ನಷ್ಟವಾಗಲಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಬುಧವಾರ ಮಲ್ಪೆ ಬಾಲಕರ ಶ್ರೀ ರಾಮ ಭಜನಾ ಮಂದಿರದಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಹಿಂದುತ್ವದ ವಿರುದ್ಧ ಯಾವುದೇ ಕಾರ್ಯಗಳು ನಡೆದರೂ ಅಲ್ಲಿ ಎಡಪಂಥೀಯರು, ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಕಾಂಗ್ರೆಸ್ ಇರುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿರುವವರೇ ಧರ್ಮಸ್ಥಳ ಪ್ರಕರಣದ ಹಿಂದಿದ್ದಾರೆ. ಸ್ವತ@ ಉಪಮುಖ್ಯಮಂತ್ರಿಗಳು ಸದನದಲ್ಲಿ ಇದೊಂದು ಷಡ್ಯಂತ್ರ ಎಂದಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಮೂಲಕ ಡಾ. ಹೆಗ್ಗಡೆಯವರು 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 50 ಕೋಟಿ ರೂ. ಅಧಿಕ ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಮದ್ಯವ್ಯಸನ ವಿಮುಕ್ತಿ ಶಿಬಿರ ಮೂಲಕ 1.5 ಲಕ್ಷ ಪರಿವಾರವನ್ನು ಉದ್ಧಾರ ಮಾಡಿದ್ದಾರೆ. ಧಮೋರ್ತ್ಥಾನ ಟ್ರಸ್ಟ್ ಮೂಲಕ 700ಕ್ಕೂ ಹೆಚ್ಚು ಪಾಳುಬಿದ್ದ ದೇಗುಲಗಳನ್ನು ಪೂರ್ಣಪ್ರಮಾಣದಲ್ಲಿ ಜೀಣೋರ್ದ್ಧಾರಗೊಳಿಸಲಾಗಿದೆ. ಇಂಥ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿರುವ ಧರ್ಮಸ್ಥಳ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಒಪ್ಪಿಸುವ ಷಡ್ಯಂತ ನಡೆಯುತ್ತಿದೆ ಎಂದು ಹೇಳಿದರು.
ಪೊಲೀಸರು ಏನೂ ಮಾಡುತ್ತಿಲ್ಲ
ಅಯೋಗ್ಯ ಎಂಬ ಪದ ಬಳಸಿದ್ದಕ್ಕೆ ನನ್ನ ವಿರುದ್ಧ ಕೇಸ್ ದಾಖಲಿಸಿದ ಸರ್ಕಾರ ಸುಪ್ರೀಂ ಕೋರ್ಟ್ವರೆಗೆ ಎಳೆದಿತ್ತು. ದಿನ ಬೆಳಗಾದರೆ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವಿರುದ್ಧ, ಬಿಜೆಪಿ ರಾ.ಸಂ. ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರರ ವಿರುದ್ಧ ಹೀನಾಯಮಾನವಾಗಿ ನಿಂದಿಸುವವರ ವಿರುದ್ಧ ಸರ್ಕಾರ ಯಾಕೆ ಕ್ರಮಕೈಗೊಳ್ಳುತ್ತಿಲ್ಲ. ಪೊಲೀಸರು ಯಾಕೆ ಸ್ವಯಂಪ್ರೇರಣೆಯಿಂದ ಕೇಸು ದಾಖಲಿಸುತ್ತಿಲ್ಲ ಎಂದು ಚಕ್ರವರ್ತಿ ಪ್ರಶ್ನಿಸಿದರು.
ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿದರು. ತೆಂಕತೊಟ್ಟಂ ಗ್ರಾಮಸಭೆಯ ಗುರಿಕಾರ ಈಶ್ವರ್ ಜಿ. ಸಾಲ್ಯಾನ್, ಮಲ್ಪೆಯ ವಿವಿಧ ಭಜನಾ ಮಂಡಳಿಯ ಪ್ರಮುಖರಾದ ವಿಲಾಸ್ ಸುವರ್ಣ, ಶಶಿಧರ್ ಕುಂದರ್, ನಾರಾಯಣ ಕರ್ಕೇರ, ಗೀತಾ ಜಯಂತಿ ಸಾಲಿಯಾನ್, ಸತೀಶ್ ಬಂಗೇರ, ಧನಂಜಯ ಕಾಂಚನ್, ನಾಗರಾಜ್ ಕುಂದರ್, ಹರಿಯಪ್ಪ ಕೋಟ್ಯಾನ್, ವಿಠಲ ಕರ್ಕೇರ ಉಪಸ್ಥಿತರಿದ್ದರು. ಪಾಂಡುರಂಗ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.