ಮಲ್ಪೆ ಕಡಲ ತೀರದಲ್ಲಿ ಸೂರ್ಯಗ್ರಹಣ ವೀಕ್ಷಣೆ

udp-25-grahana web
Published on

ಉಡುಪಿ: ಪೂರ್ಣಪ್ರಜ್ಞಾ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘ, ಹಳೆ ವಿದ್ಯಾರ್ಥಿಗಳ ಸಂಘ ಹಾಗು ಮಲ್ಪೆ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಮಲ್ಪೆ ಕಡಲ ತೀರದಲ್ಲಿ ಮಂಗಳವಾರ ಸಾಯಂಕಾಲ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶೇಷವಾಗಿ ಕಡಲ ತೀರದಲ್ಲಿ ಕಾರ್ಯಕ್ರಮ ಅಯೋಜಿಸಿದ್ದರಿಂದ ಕ್ಕಿಕ್ಕಿರಿದು ತುಂಬಿದ ಜನರು ಸೂರ್ಯಸ್ತಮಾನದ ವೇಳೆ ಗ್ರಹಣ ಕಂಡು ಆನಂದಿಸಿದರು.

ಜಿಲ್ಲಾಧಿಕಾರಿ ಕೂರ್ಮಾ ರಾವ್ ಭಾಗವಹಿಸಿ, ಮೊದಲ ಬಾರಿಗೆ ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಿಸುತ್ತಿದ್ದೇನೆ. ಪೂರ್ಣಪ್ರಜ್ಞಾ ಕಾಲೇಜಿನ ಖಗೋಳ ವೀಕ್ಷಕರ ಸಂಘದ ಚಟುವಟಿಕೆ ಇನ್ನಷ್ಟು ಕಾಲೇಜುಗಳಿಗೆ ವಿಸ್ತರಿಸಬೇಕು ಎಂದರು.

3 ಇಂಚಿನ ಟೆಲಿಸ್ಕೋಪ್‌ನಲ್ಲಿ ಎಲ್.ಐ.ಡಿ ನೇರಪ್ರಸಾರ ಮತ್ತು ಯೂಟ್ಯೂಬ್ ಲೈವ್ ಕಾರ್ಯಕ್ರಮ ನಡೆಯಿತು. ಸ್ಥಳದಲ್ಲಿ 3 ಟೆಲಿಸ್ಕೋಪ್, ಪಿನ್ ಹೋಲ್ ಪ್ರೊಜೆಕ್ಟರ್, ಪಿನ್‌ಹೋಲ್ ಬಾಕ್ಸ್, 500 ಕನ್ನಡಕದಲ್ಲಿ ಸಾವಿರಾರು ಜನರು ಗ್ರಹಣ ವೀಕ್ಷಿಸಿದರು. ಹಳೆ ವಿದ್ಯಾರ್ಥಿಗಳಾದ ದಿನೇಶ್ ಹೆಬ್ಬಾರ್ ಮತ್ತು ಶುಭಶ್ರೀ ಶೆಣೈ ಸೂರ್ಯಗ್ರಣದ ಪ್ರಾತ್ಯಕ್ಷಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಶಾಸಕ ರಘುಪತಿ ಭಟ್, ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ, ಪಿಪಿಸಿ ಕಾಲೇಜಿನ ಅಮೆಚೂರ್ ಆಸ್ಟ್ರೋಮೋಮರ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಡಾ.ಎ.ಪಿ.ಭಟ್, ಸಂಯೋಜಕ ಅತುಲ್ ಭಟ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಆಚಾರ್ಯ, ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಪಿ.ಶ್ರೀರಮಣ ಐತಾಳ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಪ್ರಾಧ್ಯಾಪಕಿಯರಾದ ಅಪೂರ್ವ, ದೀಕ್ಷಾ, ಪ್ರಾಧ್ಯಾಪಕ ನಾಗರಾಜ್, ಐಕ್ಯೂಎಸಿಯ ಸಂಯೋಜಕ ವಿನಯ್, ಮಲ್ಪೆ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net